ಓ…ದೇವರೇ ನೀನೆಷ್ಟು ಕ್ರೂರಿ ?
ಬೆಳಕಿನ್ನೇ ಕತ್ತಲಾಗಿಸಿ ಯಾಕಾದೆ ವೈರಿ !
ಕಾಲದ ಕೀಲುಗೊಂಬೆಗೆ
ಜೀವ ತುಂಬಿ ಹಾಡಿಸಿ,ಕುಣಿಸಿ
ಒಂದಿನ ಕ್ರೂರ ವಿಧಿಯ ಕೈಗೊಪ್ಪಿಸಿದ
ಆಯಾಮ ಮೀರಿದ ಮಾಯಾವಿಯೇ !
`ಆಲದ ಮರಕ್ಕೆ ಸಿಡಿಲು ಬಡಿದು
ಪ್ರತಿಭಾ ಬಿಳಿಲು ಕಳಚಿ ನೆಲಕ್ಕುರುಳಿ
ಮಣ್ಣಲಿ ಮಣ್ಣಾದರೂ ಸೃಷ್ಟಿಯಲಿ
ದೃಷ್ಟಿ ಲೀನ….
ಕೋಟಿ ಪದಗಳಿಗೂ ಮೀರಿದ
ಗುಣ ಸಾಗರದ ಪದಕಕ್ಕೆ
ಅಕಾಲಿಕ ಸಾವಿನ ಎರಕ…
ಮಿರಿಮಿರಿ ಮಿಂಚುತ್ತಿದ್ದ ನಕ್ಷತ್ರ ಜಾರಿ
ಇದ್ದಕ್ಕಿದ್ದಂತೆ ಧೂಮಕೇತುವಿಗೆ ಡಿಕ್ಕಿ!
ಅರಗಿಸಿಕೊಳ್ಳಲು ಆಗದಷ್ಟು
ಅನಿರೀಕ್ಷಿತ ಆಘಾತ !
ನೋವಿನ ಮಳೆ, ಕಂಬನಿಯ ಹೊಳೆ !
ವಯದ ಗೆರೆ ಉದ್ದಕ್ಕೂ ಮೀರಿದ
ಸಾಧನಾ ಲಯ ಅನುಕರಣೀಯ !
ಅಂತ್ಯವಿಲ್ಲದ ಸಂತೆಯಲ್ಲಅಮರ ನೆನಪಿನ ಅಮೂಲ್ಯ ರತ್ನ !
ಯುವಶಕ್ತಿಯ ಆರಾಧ್ಯ ದೈವ
ಆಬಾಲವೃದ್ದರಿಗೂ ಅಚ್ಚುಮೆಚ್ಚಿನ `ಅಪ್ಪು’
ಅಕಾಲಿಕ ಸಾವಿನ ದವಡೆಗೆ ಸಿಲುಕಿ
ಮರೆಯಾದ ಕನ್ನಡದ ಮುದ್ದಿನ ಕಣ್ಮಣಿಯೇ !’
ಓ ದೇವರೇ
ಸದ್ವಿನೀತ ಪುನೀತನ ಈ ಸಾವು ನ್ಯಾಯವೇ…!?!?
– ಮಹಾಂತೇಶ್.ಬಿ.ನಿಟ್ಟೂರ್
ದಾವಣಗೆರೆ.