ಕೊರೊನಾ ನಿರ್ವಹಣಾ ಸಮಿತಿ ಕಾರ್ಯವನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ಸೂಚನೆ

ಶಾಸಕ ಎಂ.ಪಿ. ರೇಣುಕಾಚಾರ್ಯ

ಹೊನ್ನಾಳಿ, ಏ.28- ತಾಲ್ಲೂಕಿನ ಕೆಲ ಹಿರಿಯ ಅಧಿಕಾರಿಗಳು ಹೊನ್ನಾಳಿಗೆ ಶೋಕಿಗಾಗಿ ಬರುತ್ತಿದ್ದು,   ಕೋವಿಡ್ ನಿರ್ವಹಣಾ ಸಮಿತಿಯ ಕಾರ್ಯಗಳಿಗೆ ಕೈ ಜೋಡಿಸುವ ನಿಟ್ಟಿನಲ್ಲಿ ಸ್ಥಳದಲ್ಲಿಯೇ ಇದ್ದು,  ಸಮಿತಿಯ ಜೊತೆಗೆ ಕಾರ್ಯ ನಿರ್ವಹಿಸುವಂತೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಅವರು ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಳ್ಳ ಲಾಗಿದ್ದ ಹೊನ್ನಾಳಿ-ನ್ಯಾಮತಿ ವಿಧಾನಸಭಾ ಕ್ಷೇತ್ರಗಳ ಕೋವಿಡ್ ನಿರ್ವಹಣಾ ಸಮಿತಿಯ ಅಧಿಕಾರಿಗಳ  ಸಭೆಯಲ್ಲಿ ಮಾತನಾಡಿದರು.

ಲಾಕ್‍ಡೌನ್‍ನ ದಿನದಲ್ಲಿ ಬೆಂಗ ಳೂರಿನಿಂದ ತಾಲ್ಲೂಕಿನ ಹಳ್ಳಿಗಳಿಗೆ 28 ಜನರು ಬಂದಿದ್ದು, ಹೊನ್ನಾಳಿ ಪಟ್ಟಣ ದಲ್ಲಿ ಬೆಂಗಳೂರಿನಿಂದ ಬರುವವರನ್ನು ತಪಾಸಣೆಗೆ ಒಳಪಡಿಸಿ ಕೊರೊನಾ ನಿವಾರಣೆಗೆ  ಅಧಿಕಾರಿಗಳು ಜಾಗೃತಿ ಮೂಡಿಸಬೇಕಿದೆ ಎಂದರು. ಕೊರೊನಾ ಹೆಚ್ಚಾಗುತ್ತಿದ್ದು ಅಧಿಕಾರಿಗಳು ಸಮಾ ರೋಪಾದಿಯಲ್ಲಿ ಕೆಲಸ ಮಾಡಬೇಕು. ಸರ್ಕಾರದ ಕೋವಿಡ್ ನಿಯಮಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕಿದ್ದು, ನಿಯಮಗಳನ್ನು ಉಲ್ಲಂಘಿಸುವವರ ವಿರುಧ್ಧ ಸೂಕ್ತ ಕಾನೂನು ಕ್ರಮ ಜರುಗಿ ಸಬೇಕು. ಎಲ್ಲಾ ಅಧಿಕಾರಿಗಳು 24×7 ಕಾರ್ಯನಿರ್ವಹಿಸಬೇಕು ಎಂದರು.

ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಈಗಾಗಲೇ ಕೋವಿಡ್ ಸೋಂಕಿತರಿಗೆ 50 ಬೆಡ್‍ಗಳ ವ್ಯವಸ್ಥೆ ಮಾಡಲಾಗಿದೆ. ಮಾದನಬಾವಿಯ ಮೊರಾರ್ಜಿ ದೇಸಾಯಿ ವಸತಿಯುತ ಶಾಲೆಯಲ್ಲಿ 100 ಬೆಡ್‍ಗಳ ವ್ಯವಸ್ಥೆ ಮಾಡಲಾಗಿದ್ದು, ಕಿತ್ತೂರು ರಾಣಿಚೆನ್ನಮ್ಮ ವಸತಿ ಶಾಲೆಯನ್ನು ಕೋವಿಡ್ ರೋಗಿಗಳಿಗೋಸ್ಕರ ಕಾಯ್ದಿರಿಸಲಾಗಿದೆ ಎಂದು ವಿವರಿಸಿದರು.

ತಹಶೀಲ್ದಾರ್ ಬಸನಗೌಡ ಕೋಟೂರ ಮಾತನಾಡಿ ಇದುವರೆಗೂ ಅವಳಿ ತಾಲ್ಲೂಕುಗಳಲ್ಲಿ 29,519 ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ. 22,150 ಕೋವಿಡ್ ಮೊದಲನೇ ಹಂತದ ಲಸಿಕೆಯನ್ನು ನೀಡಲಾಗಿದ್ದು, 7,000 ಎರಡನೇ ಹಂತದ ಲಸಿಕೆಯನ್ನು ನೀಡಿದ್ದು ಎಲ್ಲಾ ಇಲಾಖಾಧಿಕಾರಿಗಳು ಕೋವಿಡ್ ನಿರ್ವಹಣೆಯಲ್ಲಿ ನಿರ್ಲಕ್ಷ್ಯಿಸದೇ ತಮಗೆ ವಹಿಸಿದ ಕೆಲಸಗಳನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕೆಂದು ಸೂಚಿಸಿದರು.

ಕೋವಿಡ್ ನಿರ್ವಹಣಾ ಸಮಿತಿ ಸಭೆಯಲ್ಲಿ ನ್ಯಾಮತಿ ತಾಲ್ಲೂಕು ತಹಶೀ ಲ್ದಾರ್ ತನುಜಾ ಸವದತ್ತಿ, ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಡಾ. ಕೆಂಚಪ್ಪ ಆರ್.ಬಂತಿ, ತಾಲ್ಲೂಕು ಆಸ್ಪತ್ರೆ ಆಡಳಿತಾಧಿಕಾರಿ ಡಾ. ಚಂದ್ರಪ್ಪ, ಇಒ ಗಂಗಾಧರಮೂರ್ತಿ, ಬಿಇಒ ಜಿ. ರಾಜೀವ್, ಬಿಸಿಎಂ ಇಲಾಖಾಧಿಕಾರಿ ಮೃತ್ಯುಂಜಯ ಸ್ವಾಮಿ, ಪುರಸಭಾ ಅಧ್ಯಕ್ಷ ಕೆ.ವಿ. ಶ್ರೀಧರ್, ಇಂಜಿನಿಯರ್ ದೇವರಾಜ್, ನ್ಯಾಮತಿ ಪಿಎಸ್‌ಐ ರಮೇಶ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಿ.ಟಿ. ಸುರೇಶ್, ಸಿಡಿಪಿಒ ಮಹಾಂತಸ್ವಾಮಿ, ಜಿ.ಪಂ. ಸದಸ್ಯ ಎಂ.ಆರ್. ಮಹೇಶ್ ಸೇರಿದಂತೆ
ಅವಳಿ ತಾಲ್ಲೂಕುಗಳ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!