ದಾವಣಗೆರೆ, ಏ.27-ಗೋಹತ್ಯೆ ನಿಷೇಧ ಕಾನೂನು ಜಾರಿಗೆ ಬಂದಿದ್ದರೂ, ಇದುವರೆಗೆ ಗೋಹತ್ಯೆ ನಿಲ್ಲದಿರುವುದು ನಾಚಿಗೇಡಿನ ಸಂಗತಿ ಎಂದು ಏಕಲವ್ಯ ಬ್ರಿಗೇಡ್ ಕಳವಳ ವ್ಯಕ್ತಪಡಿಸಿದೆ. ಜಿಲ್ಲೆಯಾದ್ಯಂತ ಗೋಹತ್ಯೆ ನಿರಂತರವಾಗಿ ನಡೆಯುತ್ತಿದ್ದು, ಜಿಲ್ಲೆಯ ಜನ ತಲೆ ತಗ್ಗಿಸುವಂ ತಾಗಿದೆ. ಕಾನೂನು ಜಾರಿಯಾಗಿ 3 ತಿಂಗಳಾದರೂ ಅನುಷ್ಠಾನಕ್ಕೆ ಬಾರ ದಿರುವುದು ಬೇಸರದ ವಿಷಯ ಎಂದರು. ಗೋಹತ್ಯೆ ಹಂತಕರನ್ನು ತಕ್ಷ ಣವೇ ಬಂಧಿಸಿ, ಮೂಕ ಪ್ರಾಣಿಗಳನ್ನು ರಕ್ಷಿಸ ಬೇಕೆಂದು ಜಿಲ್ಲಾಧಿಕಾರಿಗಳಿಗೆ ಬ್ರಿಗೇಡ್‌ನ ಕೆ.ಎನ್. ಓಂಕಾರಪ್ಪ, ಆರ್. ಪ್ರತಾಪ್ ಹಾಗೂ ವಕ್ತಾವರ್ ಸಿಂಗ್, ರವೀಂದ್ರ, ಆರ್. ಮಂಜಪ್ಪ, ಸಲೀನಕುಮಾರಿ ಆಗ್ರಹಿಸಿದ್ದಾರೆ.
January 11, 2025