ಆಸ್ಪತ್ರೆಗಳಲ್ಲಿ ಸಿಗದ ಚಿಕಿತ್ಸೆ, ಬೆಡ್ ರೋಗಿಗಳ ಪರದಾಟ-ಜೀವಕ್ಕೆ ಸಂಕಷ್ಟ

ಆಸ್ಪತ್ರೆಗಳಲ್ಲಿ ಸಿಗದ ಚಿಕಿತ್ಸೆ, ಬೆಡ್ ರೋಗಿಗಳ ಪರದಾಟ-ಜೀವಕ್ಕೆ ಸಂಕಷ್ಟ - Janathavaniದಾವಣಗೆರೆ, ಏ.27- ಕೋವಿಡ್ ಎರಡನೇ ಅಲೆಗೆ ಸಿಲುಕಿದ ಸೋಂಕಿತರು ಹಾಗೂ ಕೋವಿಡೇತರ ರೋಗಿಗಳು ಆಸ್ಪತ್ರೆಗಳಲ್ಲಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ, ಬೆಡ್ ಸಹ ಸಿಗದೇ ಪರದಾಡುವ, ಜೀವವನ್ನೇ ಕಳೆದುಕೊಳ್ಳುವ ಸ್ಥಿತಿ ಜಿಲ್ಲೆಯಲ್ಲಿ ಎದುರಾಗಿದೆ. 

ಬೆಡ್ ಗಾಗಿ ವೃದ್ಧೆ ಪರದಾಟ: ಹರಪನಹಳ್ಳಿ ತಾಲ್ಲೂಕಿನ ಕೋಡಿಯಾಲ ಗ್ರಾಮದ ವೃದ್ಧೆ ಅನಸೂಯಮ್ಮ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಕೋವಿಡ್ ಟೆಸ್ಟ್‍ನಲ್ಲಿ ನೆಗೆಟಿವ್ ಬಂದಿದ್ದರೂ ಉಸಿರಾಟದ ತೀವ್ರ ಸಮಸ್ಯೆಯಿಂದ ಬಳಲುತ್ತಿದ್ದ ಅನಸೂಯಮ್ಮ ಅವರನ್ನು ಜಿಲ್ಲಾಸ್ಪತ್ರೆಗೆ ಕರೆ ತರಲಾಗಿತ್ತು. 

ಜಿಲ್ಲಾಸ್ಪತ್ರೆಯಲ್ಲಿ ಬೆಡ್ ಇಲ್ಲವೆಂದು ಹೇಳಿ, ಅಲ್ಲಿನ ಸಿಬ್ಬಂದಿ ವಾಪಾಸ್ ಕಳಿಸಿ, ಖಾಸಗಿ ಆಸ್ಪತ್ರೆಗೆ ಹೋಗುವಂತೆ ಹೇಳಿದ್ದಾರೆ. ಪಕ್ಕದ ಬಾಪೂಜಿ ಆಸ್ಪತ್ರೆಗೆ ಅನುಸೂಯಮ್ಮನನ್ನು ಕರೆದೊಯ್ದರೆ ಅಲ್ಲಿಯೂ ಬೆಡ್ ಇರಲಿಲ್ಲ. ಬೆಡ್‍ಗಾಗಿ ಇತರೆ ಖಾಸಗಿ ಆಸ್ಪತ್ರೆಗಳಿಗೆ ಸುತ್ತಾಡಿ ಹೈರಾಣದ ಕುಟುಂಬಗಳು ತೀವ್ರ ಪರದಾಡಬೇಕಾಯಿತು. 

ಜಿಲ್ಲಾಸ್ಪತ್ರೆ ರೆಫರೆನ್ಸ್ ಪತ್ರ ತೋರಿಸಿದರೂ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲು ಮಾಡಿಕೊಳ್ಳಲಿಲ್ಲ. ಒಂದು ಆಸ್ಪತ್ರೆಯಲ್ಲಂತೂ 20 ಸಾವಿರ ಮುಂಗಡ ಹಣ ಕಟ್ಟಿದರೆ ಮಾತ್ರ ದಾಖಲಿಸಿಕೊಳ್ಳುವುದಾಗಿ ಹೇಳಿದ್ದಾರೆ. ಹಣ ಕಟ್ಟಲಾಗದ ಬಡ ಕುಟುಂಬವು ವೃದ್ಧೆ ಅನಸೂಯಮ್ಮನನ್ನು ಊರಿಗೆ ವಾಪಸ್ ಕರೆದೊಯ್ದಿದ್ದಾರೆ.

error: Content is protected !!