ಕೂಡ್ಲಿಗಿ : ಶುದ್ಧ ಕುಡಿಯುವ ನೀರಿನ ಘಟಕದ ದುರಸ್ತಿಗೆ ನಾಗರಿಕರ ಆಗ್ರಹ

ಕೂಡ್ಲಿಗಿ, ಏ.27- ಪಟ್ಟಣದ 15ನೇ ವಾರ್ಡ್ ಪಶುಪಾಲನಾ ಆಸ್ಪತ್ರೆ ಹತ್ತಿರದಲ್ಲಿರುವ  ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿದ್ದು, ಕಳೆದ ಮೂರು ತಿಂಗಳಿಂದ ಕಾರ್ಯನಿರ್ವಹಿಸುತ್ತಿಲ್ಲ.  ಪ್ರತಿದಿನ ನೀರಿಗಾಗಿ ಪರದಾಡುವಂತಾಗಿದೆ ಎಂದು ನಾಗರಿಕರು ದೂರಿದ್ದಾರೆ.

ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ   ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ ಎಂದು ನಾಗರಿಕರು  ಆಕ್ರೋಶ ವ್ಯಕ್ತಪಡಿಸಿದ್ದು, ಚೆನ್ನಾಗಿಯೇ ಕಾರ್ಯನಿರ್ವಹಿಸುತ್ತಿದ್ದ ನೀರಿನ ಘಟಕದ ಬಿಡಿ ಭಾಗ ಹಾಗೂ ಯಂತ್ರಗಳನ್ನು ಬೇರೆ ಘಟಕಕ್ಕೆ ಅಳವಡಿಸಲಾಗಿದೆ ಎಂದು ಹಿರಿಯ ನಾಗರಿಕರು ದೂರಿದ್ದಾರೆ.

ಪಟ್ಟಣದ ಬಹುತೇಕ ನೀರಿನ ಘಟಕಗಳ ನಿರ್ವಹಣೆ ಸರಿಯಾಗಿಲ್ಲ. ಕೆಲವೊಂದು 6 ತಿಂಗಳು, ವರ್ಷಗಳಿಂದಲೂ ಕೆಟ್ಟು ನಿಂತಿವೆ. ಆದರೆ ದುರಸ್ತಿ ಗೊಳಿಸುತ್ತಿಲ್ಲ ಎಂದು ಪ.ಪಂ. ಮುಖ್ಯಾಧಿಕಾರಿ ವಿರುದ್ಧ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೀಘ್ರವೇ ಸ್ಥಗಿತಗೊಂಡಿರುವ ಘಟಕಗಳನ್ನು ಪ್ರಾರಂಭಿಸ ಬೇಕು. ನಿರ್ಲಕ್ಷ್ಯ ವಹಿಸಿದ್ದಲ್ಲಿ, ಪ.ಪಂ. ಕಚೇರಿಗೆ ಮುತ್ತಿಗೆ ಹಾಕುವುದಾಗಿ 15ನೇ ವಾರ್ಡ್ ನಾಗರಿಕರು, ಕೆಲ ಸಂಘಟನೆಗಳ ಪದಾಧಿಕಾರಿಗಳು ಎಚ್ಚರಿಸಿದ್ದಾರೆ.

error: Content is protected !!