ಹೊನ್ನಾಳಿ, ಜು.19- ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕಿನಲ್ಲಿ ಮುಂಗಾರು ಚುರುಕಾಗಿ ಉತ್ತಮ ಮಳೆಯಾಗಿದ್ದು, ರೈತರಿಗೆ ಯೂರಿಯಾ ರಸಗೊಬ್ಬರದ ಅಭಾವ ಉಂಟಾಗಬಾರದೆಂದು ಇಂದು ಕೃಷಿ ಇಲಾಖೆ ಅಧಿಕಾರಿಗಳು ಅವಳಿ ತಾಲ್ಲೂಕಿನ 68 ರಸಗೊಬ್ಬರ ಮಾರಾಟ ಮಳಿಗೆಗಳ ತಪಾಸಣೆ ಕೈಗೊಂಡರು.
ಮಾರಾಟಗಾರರು ರಸಗೊಬ್ಬರವನ್ನು ಹೆಚ್ಚಿನ ಆಧಾರ್ ಕಾರ್ಡ್ ಮಾಹಿತಿ ಪಡೆಯದೆ, ಸರ್ಕಾರ ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಾಗೂ ಬೇರೆ ತಾಲ್ಲೂಕಿನ ರೈತರಿಗೆ ಮಾರಾಟ ಮಾಡಬಾರದೆಂದು ಖಾಸಗಿ ಮಾರಾಟಗಾರರಿಗೆ ಎಚ್ಚರಿಕೆ ನೀಡಲಾಯಿತು.
ಸಹಾಯಕ ಕೃಷಿ ನಿರ್ದೇಶಕ ಸಿ.ಟಿ. ಸುರೇಶ, ಕೃಷಿ ಅಧಿಕಾರಿ ಅತೀಕ್ ಉಲ್ಲಾ, ಸವಿತಾ ಕಮ್ಮಾರ್, ಅಶ್ವಿನಿ, ಗೋವಿಂದ ನಾಯ್ಕ, ಶಶಿಧರ್ ಹಾಗೂ ರಾಜಕುಮಾರ್ ಕುಚನೂರ್ರವರನ್ನು ಒಳಗೊಂಡ ತಂಡ ತಾಲ್ಲೂಕಿನಾದ್ಯಂತ ಮಳಿಗೆಗಳಿಗೆ ಭೇಟಿ ನೀಡಿ ಭೌತಿಕ ದಾಸ್ತಾನು ಮತ್ತು ಪಿಒಎಸ್ನಲ್ಲಿ ವಿತರಿಸಲಾಗಿರುವ ದಾಸ್ತಾನಿನ ಮಾಹಿತಿ ಪಡೆದು, ಪಿಒಎಸ್ನಲ್ಲಿ ನಮೂದಿಸಿದೆ.
ಯೂರಿಯಾ ವಿತರಣೆ ಮಾಡಿದಲ್ಲಿ ಕಟ್ಟುನಿಟ್ಟಾಗಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ರೈತರಿಗಾಗಿ ಇಫ್ಕೋ ಸಂಸ್ಥೆ ಅಭಿವೃದ್ಧಿಪಡಿಸಿರುವ ನ್ಯಾನೋ ಯೂರಿಯಾ ಬಳಸುವಂತೆ ಮಾಹಿತಿ ನೀಡಿ, ಕೆಲ ರೈತರಿಗೆ ಸಾಂಕೇತಿಕವಾಗಿ ಖಾಸಗಿ
ಮಾರಾಟ ಮಳಿಗೆಯಲ್ಲಿ ವಿತರಿಸುವ ಮೂಲಕ ಯೂರಿಯಾ ಗಟ್ಟಿ ಗೊಬ್ಬರಕ್ಕೆ ನ್ಯಾನೋ ಯೂರಿಯಾ ಪರ್ಯಾಯವಾಗಿದೆ ಎಂದು ತಿಳಿಸಿದರು.