ಉಡುತಡಿಗೆ ವಚನಾನಂದ ಶ್ರೀ ಭೇಟಿ

ಶಿವಮೊಗ್ಗ, ಏ.27- ಕನ್ನಡದ ಮೊದಲ ಕವಯತ್ರಿ, ವೈರಾಗ್ಯನಿಧಿ ಅಕ್ಕಮಹಾದೇವಿ ಅವರ  ಜಯಂತಿ ದಿನವಾದ ಇಂದು ಅವರ ಜನ್ಮಸ್ಥಳವಾದ ಉಡುತಡಿಯ ಅವಿಮುಕ್ತ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಅವರು  ಪೂಜೆ  ಸಲ್ಲಿಸಿ  ತೊಟ್ಟಿಲು ತೂಗಿದರು. ಶಿವಮೊಗ್ಗದ ಬಸವ ತತ್ವ ಪೀಠದ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ, ಶಿರಸಿಯ ರುದ್ರದೇವರ ಮಠದ ಶ್ರೀ ಬಸವ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ  ಜಡೆ ಹಿರೇಮಠದ ಶ್ರೀ ಅಮರೇಶ್ವರ ಸ್ವಾಮೀಜಿ ಹಾಜರಿದ್ದರು. 

error: Content is protected !!