ಹರಿಹರ, ಏ.26- ಕೊರೊನಾ ವೈರಸ್ ಸೋಂಕು ಹರಡದಂತೆ ಹಾಗೂ ಸಾರ್ವಜನಿಕ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಹೆಚ್ಚು ಜನರು ಸೇರುವಂತಹ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಹರಿಹರ ತಹಶೀಲ್ದಾರರು ಸೂಚನೆ ನೀಡಿರುವ ಅನುಸಾರ ಹರಿಹರ ಮಾರುಕಟ್ಟೆ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಪ್ರತಿ ಮಂಗಳವಾರ ಜರುಗುವ ಜಾನುವಾರು (ಕುರಿ ಮತ್ತು ಮೇಕೆ) ಸಂತೆಯನ್ನು ಸರ್ಕಾರದ ಮುಂದಿನ ಆದೇಶದವರೆಗೆ ರದ್ದುಗೊಳಿಸಲಾಗಿದೆ.
ಕುರಿ ಮತ್ತು ಮೇಕೆ ಹಾಗೂ ಜಾನುವಾರುಗಳನ್ನು ರೈತಬಾಂಧವರು ಮಾರಾಟಕ್ಕೆ ತರಬಾರದು. ಖರೀದಿದಾರರು, ಮಾರಾಟಗಾರರು, ಸಾರ್ವಜನಿಕರು ಸಹಕರಿಸಬೇಕೆಂದು ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯದರ್ಶಿ ತಿಳಿಸಿದ್ದಾರೆ.