ಮಲೇಬೆನ್ನೂರು, ಜು.19- ಪಟ್ಟಣದ 2 ಪರೀಕ್ಷಾ ಕೇಂದ್ರಗಳಲ್ಲಿ ಸೋಮವಾರ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಎಲ್ಲಾ 358 ವಿದ್ಯಾರ್ಥಿಗಳು ಬರೆದರು.
ವಿಶೇಷ ಎಂದರೆ ಈ ಬಾರಿ ಒಬ್ಬ ವಿದ್ಯಾರ್ಥಿಯೂ ಗೈರು ಆಗಿರಲಿಲ್ಲ. ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗದ ಪರೀಕ್ಷಾ ಕೇಂದ್ರದಲ್ಲಿ 196 ವಿದ್ಯಾರ್ಥಿಗಳು ಮತ್ತು ಬೀರಲಿಂಗೇಶ್ವರ ಬಾಲಕಿಯರ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ 162 ವಿದ್ಯಾರ್ಥಿಗಳು ವಿಜ್ಞಾನ, ಗಣಿತ ಮತ್ತು ಸಮಾಜ ವಿಜ್ಞಾನ ಪ್ರಶ್ನೆ ಪತ್ರಿಕೆಗಳಿಗೆ ಉತ್ತರ ಬರೆದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ, ಬೀರಲಿಂಗೇಶ್ವರ ಬಾಲಕಿಯರ ಪ್ರೌಢಶಾಲೆ, ಬೀರಲಿಂಗೇಶ್ವರ ಬಾಲಕರ ಪ್ರೌಢಶಾಲೆ, ಜಾಮಿಯಾ ಉರ್ದು ಪ್ರೌಢಶಾಲೆ,
ಸರ್ಕಾರಿ ಉರ್ದು ಪ್ರೌಢಶಾಲೆ, ರಂಗನಾಥ್ ಪ್ರೌಢಶಾಲೆ, ಭಾನು ಹೈಟೆಕ್ ಪ್ರೌಢಶಾಲೆ, ರಾಜರಾಜೇಶ್ವರಿ ಪ್ರೌಢಶಾಲೆ ಮತ್ತು ಹಾಲಿವಾಣ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪರೀಕ್ಷೆ ಬರೆದರು ಎಂದು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಹೆಚ್. ಹನುಮಂತಪ್ಪ, ಡಿ. ತಿಮ್ಮಪ್ಪ `ಜನತಾವಾಣಿ’ಗೆ ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿ ಬ್ಯಾನರ್‌ಗಳನ್ನು ಹಾಕಿದ್ದು ವಿಶೇಷವಾಗಿತ್ತು. ಪ್ರಶ್ನೆ ಪತ್ರಿಕೆಯ ಅಭಿರಕ್ಷಕರಾಗಿ ರೇವಣಸಿದ್ದಪ್ಪ ಅಂಗಡಿ, ಮಹಮ್ಮದ್ ಇಲಿಯಾಸ್ ಕಾರ್ಯನಿರ್ವಹಿಸಿದರು.