ಜಗಳೂರು, ಏ.26- ತಾಲ್ಲೂಕಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಗುರುಸಿದ್ಧಾಪುರ ಪ್ರೌಢಶಾಲೆಯ ಮುಖ್ಯಶಿಕ್ಷಕ ಮಂಜಪ್ಪ ಅಧಿಕಾರ ವಹಿಸಿಕೊಂಡಿದ್ದಾರೆ. ಹಿಂದಿನ ಬಿಇಒ ಸಿ.ಎಸ್. ವೆಂಕಟೇಶ್ ಅವರು ಎಸಿಬಿ ಬಲೆಗೆ ಬಿದ್ದ ಕಾರಣ ಆ ಸ್ಥಾನ ತೆರವಾಗಿತ್ತು. ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಉಲೇಪ್ಪ, ಕಾರ್ಯದರ್ಶಿ ಎಂ. ಪ್ರಕಾಶ್, ಸಂಘದ ಪದಾಧಿಕಾರಿಗಳು ಮತ್ತು ಶಿಕ್ಷಕರು ಮಂಜಪ್ಪನವರಿಗೆ ಪುಸ್ತಕ ನೀಡುವುದರ ಮೂಲಕ ಸ್ವಾಗತಿಸಿದರು. ನಿವೃತ್ತ ನೌಕರರ ಸಂಘದ ಅಧ್ಯಕ್ಷ ಆನಂದಪ್ಪ, ಸತೀಶ್ ಇನ್ನಿತರರು ಹಾಜರಿದ್ದರು.
December 26, 2024