ಹರಪನಹಳ್ಳಿ ತಾ.ನಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ

ಹರಪನಹಳ್ಳಿ, ಏ.26- ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದಿಂದ ತಾಲ್ಲೂಕಿನ ನಿಟ್ಟೂರು, ಬಸಾಪುರ, ತಾವರಗೊಂದಿ ಗ್ರಾಮಗಳಲ್ಲಿ ಶಾಸಕ ಜಿ. ಕರುಣಾಕರ ರೆಡ್ಡಿ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ಚಿಗಟೇರಿ ಗ್ರಾಮದಲ್ಲಿ  ಶುಶ್ರೂಷಕಿಯರ (ಸ್ಟಾಫ್‌ ನರ್ಸ್) ನೂತನ ಕಟ್ಟಡ ಉದ್ಘಾಟಿಸಿದರು.

ನಿಟ್ಟೂರು ಗ್ರಾಮದಿಂದ ತಾವರಗೊಂದಿ ಗ್ರಾಮದವರೆಗೆ ಕೆ.ಕೆ.ಆರ್.ಡಿ.ಬಿ ಯೋಜನೆಯಡಿಯಲ್ಲಿ 135.00 ಲಕ್ಷಗಳಲ್ಲಿ 2 ಕಿಮೀ ಉದ್ದದ ಸಿಸಿ ರಸ್ತೆ ಕಾಮಗಾರಿ ಹಾಗೂ ತಾವರಗೊಂದಿಯಿಂದ ನಿಟ್ಟೂರು, ಬಸಾಪುರ ಗ್ರಾಮದವರೆಗೆ ಕೆ.ಕೆ.ಆರ್.ಡಿ.ಬಿ ಯೋಜನೆಯಡಿಯಲ್ಲಿ ಅಂದಾಜು ಮೊತ್ತ 275.00 ಲಕ್ಷಗಳಲ್ಲಿ 4 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ಚಿಗಟೇರಿ ಗ್ರಾಮದಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ ಯೋಜನೆಯಡಿಯಲ್ಲಿ 35.00 ಲಕ್ಷಗಳಲ್ಲಿ ಶುಶ್ರೂಷಕಿಯರ  (ಸ್ಟಾಫ್ ನರ್ಸ್) ಗಳಿಗೆ ವಸತಿ ಗೃಹದ ನೂತನ ಕಟ್ಟಡ ಉದ್ಘಾಟಿಸಿದರು. 

ಈ ಸಂದರ್ಭದಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಎಇಇ ಸತೀಶ್ ಗೌಡ ಪಾಟೀಲ್, ಜೆ.ಇ ಬಸವರಾಜ್, ಎ.ಇ ಕಿರಣ್, ಬಿಜೆಪಿ ಅಧ್ಯಕ್ಷ ಸತ್ತೂರು ಹಾಲೇಶ್, ಜಿಲ್ಲಾ ಬಿಜೆಪಿ ಎಸ್‌ಟಿ ಘಟಕದ ಕಾರ್ಯದರ್ಶಿ ಆರ್. ಲೋಕೇಶ್, ಚಿಗಟೇರಿ ಗ್ರಾ.ಪಂ ಅಧ್ಯಕ್ಷೆ ಶಾರದಮ್ಮ, ಮುಖಂಡರಾದ ಎಂ.ಪಿ ನಾಯ್ಕ್, ಬಾಗಳಿ ಕೊಟ್ರೇಶಪ್ಪ, ರಾಘವೇಂದ್ರ ಶೆಟ್ಟಿ,  ಯು.ಪಿ ನಾಗರಾಜ್, ಸಂತೋಷಕುಮಾರ್, ನೀಲಗುಂದ ರೆಡ್ಡಿ ಸಿದ್ದೇಶ್, ಆನಂದಗೌಡ, ನಾಗರಾಜ್, ಐ.ಮಂಜುನಾಥ್, ಕಿರಣ್ ಕುಮಾರ್, ನವೀನ್ ಪಟೇಲ್, ನಿಟ್ಟೂರು ಹನುಮಂತಪ್ಪ, ಯಡಿಹಳ್ಳಿ ಶೇಖರಪ್ಪ ಮತ್ತಿತರರಿದ್ದರು.

error: Content is protected !!