ದಾವಣಗೆರೆ, ಏ. 24 – ಕೊರೊನಾ ಸೋಂಕು ಹೆಚ್ಚುತ್ತಿರುವ ಕಾಲದಲ್ಲಿ ಸರ್ಕಾರ ಒಂದಷ್ಟು ಔಷಧಗಳನ್ನು ನೀಡುತ್ತಿದೆ. ಐವರ್ಮೆಕ್ಟಿನ್ ಎಂಬ ಔಷಧವನ್ನು ನೀಡುತ್ತಿಲ್ಲ. ಈ ಔಷಧಕ್ಕೆ ಒಂದಕ್ಕೆ 370 ಇರುವುದರಿಂದ ಬಡವರಿಗೆ ವೆಚ್ಚ ಭರಿಸುವುದು ಕಷ್ಟ. ಹಾಗಾಗಿ ದಾನಿಗಳು ಈ ಔಷಧವನ್ನು ಖರೀದಿಸಿ, ರೆಡ್ಕ್ರಾಸ್ಗೆ ನೀಡಿದರೆ ಅವುಗಳನ್ನು ಅಗತ್ಯ ಇರುವ ಬಡವರಿಗೆ ವಿತರಿಸಲಾಗುವುದು ಎಂದು ರೆಡ್ಕ್ರಾಸ್ ಅಧ್ಯಕ್ಷ ಡಾ. ಎ.ಎಂ. ಶಿವಕುಮಾರ್ ಮನವಿ ಮಾಡಿದ್ದಾರೆ.
ಈ ಔಷಧದ ವೆಚ್ಚವನ್ನು ಭರಿಸುವವರು ಇದ್ದರೆ ಇಂಡಿಯನ್ ರೆಡ್ ಕ್ರಾಸ್ನ ಉಳಿತಾಯ ಖಾತೆಗೆ (ಖಾತೆ ನಂಬರ್ 64026238520 IFSC ಕೋಡ್ : ಎಸ್ಬಿಐಎನ್ 0040947) ಕೊಡುಗೆ ನೀಡಬಹುದು. ಆಸಕ್ತರು ಮೊಬೈಲ್ 9964582203, ದೂರವಾಣಿ 08192-252550 ಸಂಪರ್ಕಿಸಬಹುದು.