ಎಫ್‌ಡಿಎ : ಮಧ್ಯಾಹ್ನದ ಪರೀಕ್ಷೆಗೆ 47 ಅಭ್ಯರ್ಥಿಗಳು ಗೈರು

ದಾವಣಗೆರೆ, ಫೆ.28- ಭವಿಷ್ಯದಲ್ಲಿ ಸರ್ಕಾರಿ ಉದ್ಯೋಗದ ಕನಸು ಹೊತ್ತು ಪರೀಕ್ಷಾರ್ಥಿಗಳು ಇಂದು ಕೆಪಿಎಸ್‍ಸಿ ನಡೆಸಿದ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಿದರು.

ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಕಳೆದು ತಿಂಗಳು ನಡೆಯಬೇಕಿದ್ದ ಪರೀಕ್ಷೆಯನ್ನು ಇಂದಿಗೆ ಮುಂದೂಡಲಾಗಿತ್ತು. ಮತ್ತೊಮ್ಮೆ ಅವಘಡ ಸಂಭವಿಸಬಾರದು ಎಂಬ ಉದ್ದೇಶದಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಬಿಗಿ ಬಂದೋಬಸ್ತ್ ನಡುವೆ ಯಾವುದೇ ಆತಂಕವಿಲ್ಲದೇ ಬೆಳಿಗ್ಗೆ ಮತ್ತು ಮಧ್ಯಾಹ್ನ ಎರಡು ಪ್ರಶ್ನೆ ಪತ್ರಿಕೆಗಳಿಗೆ ಅಭ್ಯರ್ಥಿಗಳು ಪರೀಕ್ಷೆ ಬರೆದರು.

ನಗರದ 33 ಕೇಂದ್ರಗಳಲ್ಲಿ ಈ ಸ್ಪರ್ಧಾತ್ಮಕ ಪರೀಕ್ಷೆ ಸುಗಮವಾಗಿ ನಡೆದಿದೆ. 11688 ನೋಂದಾಯಿತ ಪರೀಕ್ಷಾರ್ಥಿಗಳ ಪೈಕಿ ಬೆಳಗ್ಗೆ ನಡೆದ ಸಾಮಾನ್ಯ ಜಾನ ಪರೀಕ್ಷೆಗೆ 7812 ಪರೀಕ್ಷಾರ್ಥಿಗಳು ಪರೀಕ್ಷೆ ಬರೆದಿದ್ದು, 3876 ಮಂದಿ ಗೈರಾಗಿದ್ದಾರೆ. ಮಧ್ಯಾಹ್ನ ನಡೆದ ಸಾಮಾನ್ಯ ಕನ್ನಡ ಅಥವಾ ಇಂಗ್ಲಿಷ್ ಪರೀಕ್ಷೆಗೆ 7765 ಮಂದಿ ಪರೀಕ್ಷೆ ಬರೆದಿದ್ದು, 3923 ಮಂದಿ ಗೈರಾಗಿದ್ದಾರೆ. ಬೆಳಗ್ಗೆ ಪರೀಕ್ಷೆ ಎದುರಿಸಿದ್ದ 47 ಮಂದಿ ಮಧ್ಯಾಹ್ನದ ಪರೀಕ್ಷೆಯಿಂದ ದೂರ ಸರಿದಿದ್ದಾರೆ.

ಎಫ್‌ಡಿಎ : ಮಧ್ಯಾಹ್ನದ ಪರೀಕ್ಷೆಗೆ 47 ಅಭ್ಯರ್ಥಿಗಳು ಗೈರು - Janathavani ಎಫ್‌ಡಿಎ : ಮಧ್ಯಾಹ್ನದ ಪರೀಕ್ಷೆಗೆ 47 ಅಭ್ಯರ್ಥಿಗಳು ಗೈರು - Janathavani

ಹಸುಗೂಸಿನೊಂದಿಗೆ ಬಂದು ಪರೀಕ್ಷೆ ಬರೆದ ಮಹಿಳಾ ಪರೀಕ್ಷಾರ್ಥಿ: ನಗರದ ದೃಶ್ಯಕಲಾ ಮಹಾವಿದ್ಯಾಲಯದ ಬಳಿ ಇರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ತನ್ನ 3 ತಿಂಗಳ ಹಸುಗೂಸಿನೊಂದಿಗೆ ಬಂದು ಬಾಣಂತಿ ಮಹಿಳಾ ಪರೀಕ್ಷಾರ್ಥಿ ಎನ್. ಶ್ವೇತಾ ಪರೀಕ್ಷೆ ಬರೆದಿದ್ದು ವಿಶೇಷವಾಗಿತ್ತು. 

ಪರೀಕ್ಷಾರ್ಥಿ ಶ್ವೇತಾ ದಾವಣಗೆರೆ ತಾಲ್ಲೂಕು ತೋಳಹುಣಸೆಯ ಯಲ್ಲಮ್ಮ ನಗರದವರಾಗಿದ್ದು, ತನ್ನ ಮಗು ಸಹಿತ ಪರೀಕ್ಷಾ ಕೇಂದ್ರಕ್ಕೆ ಬಂದು ಸಂಬಂಧಿ ಮಹಿಳೆಯೋರ್ವರ ಕೈಗೆ ಮಗು ನೀಡಿ ಪರೀಕ್ಷೆ ಬರೆದಿದ್ದಾರೆ. ಪರೀಕ್ಷಾ ಕೇಂದ್ರದ ಹೊರಗೆ ಕುಳಿತಿದ್ದ ಸಂಬಂಧಿಕ ಮಹಿಳೆಯ ಮಡಿಲಲ್ಲಿ ಮಗು ನಿದ್ರಿಸುತ್ತಿದ್ದರೆ ಇತ್ತ ತಾಯಿ ಶ್ವೇತಾ ಪರೀಕ್ಷೆ ಬರೆದರು. 

ಡಿಸಿ-ಸಿಇಓ ಭೇಟಿ: ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ಡಾ. ವಿಜಯ ಮಹಾಂತೇಶ್ ದಾನಮ್ಮನವರ್ ನಗರದ ಮೋತಿ ವೀರಪ್ಪ ಸರ್ಕಾರಿ ಪಿ.ಯು. ಕಾಲೇಜು ಮತ್ತು ಸಿದ್ದಗಂಗಾ ಶಾಲೆ ಸೇರಿದಂತೆ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

error: Content is protected !!