ಕೂಡ್ಲಿಗಿ: ಮಾಹಿತಿ ಹಕ್ಕು ಕಾರ್ಯಾಗಾರ

ಕೂಡ್ಲಿಗಿ, ಫೆ.25- ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಮಾನ ಮನಸ್ಕರಿಂದ ಮಾಹಿತಿ ಹಕ್ಕು ಅಧಿನಿಯಮ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಡಿವೈಎಸ್‌ಪಿ ಹರೀಶ್ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಮಾಹಿತಿ ಪಡೆಯುವವರ ಸದುದ್ದೇಶ ಮುಖ್ಯವಾಗಿರಬೇಕೆ ಹೊರತು ದುರುದ್ದೇಶದಿಂದ ಕೂಡಿರಬಾರದು ಎಂದು ಮಾಹಿತಿ ಹಕ್ಕು ಪಡೆಯುವವರಿಗೆ ಕಿವಿಮಾತು ಹೇಳಿದರು.

ಮಾಹಿತಿ ಹಕ್ಕು ಪಡೆಯುವಾಗ ಸಾಮಾಜಿಕ ಕಳಕಳಿ ಮತ್ತು ತಮ್ಮ ವೈಯಕ್ತಿಕ ಹಕ್ಕುಗಳನ್ನು ಕಾಪಾಡಿಕೊಳ್ಳುವ   ಉದ್ದೇಶವಿರಬೇಕೇ ಹೊರತು ಬೇರೆ ಬೇರೆ ಉದ್ದೇಶಗಳಿಗೆ ಮಾಹಿತಿ ಹಕ್ಕು ಅಧಿನಿಯಮ ಕಾಯ್ದೆ ದುರುಪಯೋಗವಾಗದೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಸ್ವಾಮಿಗಳು ಮಾತನಾಡಿ, ಸಮಾಜ ಹಣದ ಮುಖ ನೋಡುತ್ತದೆಯೇ ಹೊರತು ಸೇವೆಯ ಮುಖವನ್ನು ನೋಡುತ್ತಿಲ್ಲ. ಮಾಹಿತಿ ಹಕ್ಕು ಕಾಯ್ದೆಯಲ್ಲಿ ಮಾನವೀಯತೆ ಮುಖ್ಯವಾಗಬೇಕು. ಆದರೆ ಇಂದು ಕಾನೂನು ಪ್ರಕಾರ ಒತ್ತಾಯದಿಂದಲೇ ಕೆಲಸ ಮಾಡಿಸಿಕೊಳ್ಳುವ ಅನಿವಾರ್ಯತೆ ಇದೆ. ಮಾಹಿತಿ ಹಕ್ಕು ದಾರಿ ತಪ್ಪುತ್ತಿದ್ದು, ಇಂತಹ ಕಾರ್ಯಾಗಾರಗಳ ಮೂಲಕ ಜನಸಾಮಾನ್ಯರಿಗೆ ಮಾಹಿತಿ ಹಕ್ಕು ಅಧಿನಿಯಮ ಉಪಯೋಗವಾಗಬೇಕಿದೆ ಎಂದರು.

ತಾ.ಪಂ. ಅಧ್ಯಕ್ಷೆ ಕೆ. ನಾಗರತ್ನಮ್ಮ ಲಿಂಗಪ್ಪ, ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆ ಉಪಾಧ್ಯಕ್ಷ ಪ.ಯ. ಗಣೇಶ್, ಆರ್‌ಟಿಐ ಪಾಕ್ಷಿಕ ಪತ್ರಿಕೆ ಸಂಪಾದಕ ಅಮರ್ ಬಿ. ಕಳ್ಳಿಗುಡ್ಡ, ವಕೀಲ ಸಿ. ವಿರೂಪಾಕ್ಷಪ್ಪ, ಕೂಡ್ಲಿಗಿ ವೈದ್ಯಾಧಿಕಾರಿ ಡಾ. ವಿನಯ್, ರೈತ ಸಂಘದ ಜಿಲ್ಲಾಧ್ಯಕ್ಷ ದೇವರಮನೆ ಮಹೇಶ್, ಅಂಬೇಡ್ಕರ್ ಸಂಘದ ಅಧ್ಯಕ್ಷ ಹೆಚ್. ಆಂಜನೇಯ, ವಾಲ್ಮೀಕಿ ಮಹಾಸಭಾದ ಅಧ್ಯಕ್ಷ ಸುರೇಶ್ ವಿಕ್ಟರಿ, ಪ.ಪಂ. ಸದಸ್ಯರಾದ ಶುಕುರ್, ಚಂದ್ರು, ಕೆ. ಈಶಪ್ಪ, ಸಿಐಟಿಯು ಮುಖಂಡ ಗುನ್ನಳ್ಳಿ ರಾಘವೇಂದ್ರ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಮಯೂರ, ಕರವೇ ಅಧ್ಯಕ್ಷ ಗುನ್ನಳ್ಳಿ ರಾಘು, ಸರ್ವೇಯರ್ ರಾಘು, ಗುತ್ತಿಗೆದಾರ ಸಂತೋಷ್, ಕೆ. ಅಜ್ಜಯ್ಯ ಉಪಸ್ಥಿತರಿದ್ದರು.

ಕಾರ್ಯಕ್ರಮದ ಆಯೋಜಕರಾದ ಹೆಚ್. ರಮೇಶ್, ಸಾಲುಮನಿ ರಾಘವೇಂದ್ರ, ಬಿ.ಆರ್. ಮಹಮದ್ ಸಿಮ್ರಾನ್, ಸಿ. ನೂರುಲ್ಲಾ, ಮಹ್ಮದ್ ಇಸಾಕ್, ಕೆ. ಮಹೇಶ್ ಹೆಗ್ಡಾಳ್ ಇನ್ನಿತರರಿದ್ದರು. ಶಿಕ್ಷಕ ಬುಳ್ಳಪ್ಪ ಪ್ರಾರ್ಥಿಸಿದರು. ಕೆ. ಅಜ್ಜಯ್ಯ ಸ್ವಾಗತಿಸಿದರು ಟಿ.ಎಲ್. ಕೃಷ್ಣ ನಿರೂಪಿಸಿದರು.

error: Content is protected !!