ರಾಣೇಬೆನ್ನೂರು, ಜು.15- ಇಲ್ಲಿನ ರೋಟರಿ ಹಾಗೂ ಇನ್ನರ್ ವೀಲ್ ಕ್ಲಬ್‌ನ ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ನಾಳೆ ದಿನಾಂಕ 16 ರ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಸ್ಥಳೀಯ ರೋಟರಿ ಕಾಲೇಜಿನಲ್ಲಿ ನಡೆಯಲಿದೆ.
ರೋಟರಿ ಅಧ್ಯಕ್ಷರಾಗಿ ಡಾ. ಎಲ್.ಕೆ. ಚಳಗೇರಿ, ಕಾರ್ಯದರ್ಶಿ ಡಾ. ಎಚ್.ಎಸ್. ಬೆಳವಿಗಿ, ಇನ್ನರ್ ವ್ಹೀಲ್ ಅಧ್ಯಕ್ಷರಾಗಿ ಪೂಜಾ ವಿರುಪಣ್ಣನವರ ಹಾಗೂ ಕಾರ್ಯದರ್ಶಿಯಾಗಿ ಸುಷ್ಮಾ ನಾಡಿಗೇರ್ ಅಧಿಕಾರ ವಹಿಸಿಕೊಳ್ಳುವರು.
ಉಪರಾಜ್ಯಪಾಲ ಪ್ರಕಾಶ ಗುಪ್ತಾ ಹಾಗೂ ಜಯಾ ಶ್ರೀನಿವಾಸ, ಜಗದೀಶ್ ಕಲ್ಯಾಣಿ, ವಿನುತಾ ಕಲ್ಯಾಣಿ, ಶ್ರೀನಿವಾಸ ಗುಪ್ತಾ ಪಾಲ್ಗೊಳ್ಳುವರು ಎಂದು ಡಾ. ಬಸವರಾಜ ಕೇಲಗಾರ, ಕೆ.ವಿ. ಶ್ರೀನಿವಾಸ್ ತಿಳಿಸಿದ್ದಾರೆ.