ದಾವಣಗೆರೆ, ಫೆ. 23 – ನಗರದ ಎಸ್.ಬಿ.ಸಿ. ಮಹಿಳಾ ಕಾಲೇಜು ಮತ್ತು ಅಥಣಿ ಸ್ನಾತಕೋತ್ತರ ಕೇಂದ್ರಕ್ಕೆ ದಾವಣಗೆರೆ ವಿಶ್ವವಿದ್ಯಾನಿಲಯದ ಬಿ.ಕಾಂ., ಬಿ.ಸಿ.ಎ. ಹಾಗೂ ಎಂ.ಕಾಂ., ಎಂ.ಎ. ಅರ್ಥಶಾಸ್ತ್ರ, ಎಂ.ಎ. ಇಂಗ್ಲಿಷ್ ವಿಭಾಗದಲ್ಲಿ 2019-20ನೇ ಸಾಲಿನಲ್ಲಿ ಕಾಲೇಜಿನ ವಿದ್ಯಾರ್ಥಿನಿಯರು 9 ರಾಂಕ್‌ಗಳನ್ನು ಗಳಿಸಿದ್ದಾರೆ.
ಬಿ.ಕಾಂ. ವಿಭಾಗದಲ್ಲಿ ರಕ್ಷಾ ಆರ್. ಅಜ್ಜಂಪುರ 3ನೇ ರಾಂಕ್ ಹಾಗೂ ಜಿ. ತೇಜ 9ನೇ ರಾಂಕ್, ಬಿಸಿಎ ವಿಭಾಗದಲ್ಲಿ ಟಿ.ಆರ್. ತೇಜಸ್ವಿನಿ 5ನೇ ರಾಂಕ್ ಗಳಿಸಿದ್ದಾರೆ. ಎಂ.ಕಾಂ. ವಿಭಾಗದಲ್ಲಿ ಜಿ.ಆರ್. ಕಾವ್ಯ 1ನೇ ರಾಂಕ್, ಜೆ.ಪಿ. ಜಯಲಕ್ಷ್ಮಿ 9ನೇ ರಾಂಕ್ ಮತ್ತು ಎಂ.ಎ. ಇಂಗ್ಲಿಷ್ ವಿಭಾಗದಲ್ಲಿ ಕೆ.ಪಿ. ನಿಸರ್ಗ 1ನೇ
ರಾಂಕ್, ಹೆಚ್.ಆರ್. ಧನ್ಯಶ್ರೀ 2ನೇ ರಾಂಕ್ ಪಡೆದಿದ್ದಾರೆ ಮತ್ತು ಎಂ.ಎ. ಎಕನಾಮಿಕ್ಸ್ ವಿಭಾಗದಲ್ಲಿ ಸಿ.ಎಂ. ಅಂಬಿಕಾ 7ನೇ ರಾಂಕ್ ಹಾಗೂ ಆಯೀಷಾ 10ನೇ ರಾಂಕ್ ಗಳಿಸಿದ್ದಾರೆ.
ಪದವಿ ಪರೀಕ್ಷೆಗಳಲ್ಲಿ ರಾಂಕ್‌ಗಳನ್ನು ಗಳಿಸಿ ಕಾಲೇಜಿಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿನಿಯರಿಗೆ ವಿನಾಯಕ ಎಜುಕೇಷನ್ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಶೈಲ ಜಗದ್ಗುರುಗಳು, ಅಥಣಿ ಸ್ನಾತಕೋತ್ನರ ಕೇಂದ್ರದ ಅಧ್ಯಕ್ಷ
ಅಥಣಿ ವೀರಣ್ಣ, ಎಸ್.ಬಿ.ಸಿ. ಕಾಲೇಜಿನ ಅಧ್ಯಕ್ಷ ಬಿ.ಸಿ. ಉಮಾಪತಿ, ಟ್ರಸ್ಟ್ ಉಪಾಧ್ಯಕ್ಷ ಹೊಳಿಯಪ್ಪ, ಕಾರ್ಯದರ್ಶಿ ಎನ್.ಎ. ಮುರುಗೇಶ್, ಟ್ರಸ್ಟ್ ಎಲ್ಲಾ ಸದಸ್ಯರುಗಳು ಹಾಗೂ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.