ದಾವಣಗೆರೆ, ಫೆ.23- ದಾವಣಗೆರೆ ವಿಶ್ವವಿದ್ಯಾನಿಲಯದ ದೃಶ್ಯಕಲಾ ಮಹಾವಿದ್ಯಾನಿಲಯ ಪ್ರದೇಶದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ವಸತಿ ಗೃಹ ನಿರ್ಮಾಣಕ್ಕೆ ಸರ್ಕಾರ ಮಂಜೂರು ಮಾಡಿರುವುದನ್ನು ರದ್ದುಪಡಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿಕೊಂಡಿರುವುದಾಗಿ ವಿಧಾನ ಪರಿಷತ್ ಸದಸ್ಯ ಮೋಹನ್ ಕುಮಾರ್ ಕೊಂಡಜ್ಜಿ ತಿಳಿಸಿದರು.
ನಗರದ ದೃಶ್ಯಕಲಾ ಮಹಾವಿದ್ಯಾನಿಲಯಕ್ಕೆ ಇಂದು ಸಂಜೆ ಭೇಟಿ ನೀಡಿ, ವಸತಿ ಗೃಹ ನಿರ್ಮಿಸಲು ಉದ್ದೇಶಿಸಿರುವ ಜಾಗವನ್ನು ಪರಿಶೀಲನೆ ನಡೆಸಿದರು.
ಈ ವೇಳೆ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದಾವಣಗೆರೆ ಮಧ್ಯ ಕರ್ನಾಟಕದ ಕೇಂದ್ರ ಎಂದು ರಾಜ್ಯ ಸರ್ಕಾರ 1964ರಲ್ಲಿ ಸರ್ಕಾರಿ ಕಲಾ ಶಾಲೆಯನ್ನು ಆರಂಭಿಸಲು (ಈಗಿನ ದಾವಣಗೆರೆ ವಿಶ್ವವಿದ್ಯಾಲಯ ದೃಶ್ಯ ಕಲಾ ಮಹಾವಿದ್ಯಾಲಯದ ಅಧೀನದಲ್ಲಿದ್ದು ) 22.27 ಎಕರೆ ಜಮೀನನ್ನು ಮಂಜೂರು ಮಾಡಿತ್ತು. ಇಲ್ಲಿ ಕಲಾ ಗ್ಯಾಲರಿ, ಶಿಲ್ಪ ಕಲಾ ವಿಭಾಗ, ಕಲಾ ಸ್ಟುಡಿಯೋ ಹಾಗೂ ಕಲಾ ಗ್ರಾಮ ನಿರ್ಮಾಣ ಆಗಬೇಕಾಗಿದೆ ಎಂದು ಹೇಳಿದರು.
ದೃಶ್ಯಕಲಾ ಮಹಾವಿದ್ಯಾನಿಲಯದ ಜಾಗ ಅದೇ ಉದ್ದೇಶಕ್ಕೆ ಬಳಕೆ ಆಗಬೇಕು ಅನ್ನುವುದು ನನ್ನ ಆಶಯ ಆಗಿದೆ. ಅದಕ್ಕೆ ಮುಖ್ಯ ಕಾರಣ, ನಾನು ವಿಧಾನ ಪರಿಷತ್ ಸದಸ್ಯನಾಗಿರುವುದು ಕಲೆ ಮತ್ತು ಸಂಸ್ಕೃತಿಯ ಪ್ರತಿನಿಧಿಸುವ ಮೂಲಕ ನೇಮಕಗೊಂಡಿದ್ದೇನೆ. ಈ ಕಾಲೇಜು ವಿಶ್ವವಿದ್ಯಾನಿಲಯ ಆಗುವ ಲಕ್ಷಣಗಳೆಲ್ಲ ಇದ್ದು, ಈಗಿರುವ ಭೂಮಿ ಉಳಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ.
– ಮೋಹನ್ ಕುಮಾರ್ ಕೊಂಡಜ್ಜಿ.
ದಾವಣಗೆರೆ ವಿಶ್ವವಿದ್ಯಾಲಯದ ಅಡಿಯಲ್ಲಿ ನಡೆಯುತ್ತಿ ರುವ 1964 ರಿಂದ ಆರಂಭವಾಗಿ, ಇಡೀ ಕರ್ನಾಟಕದ ಕಲಾ ಜೀವನಾಡಿ ಆಗಿದೆ. ಇಲ್ಲಿಂದ ಅಂತರರಾಷ್ಟ್ರೀಯ ಮಟ್ಟದ ಕಲಾವಿದರು ತಯಾರಾಗಿ, ಕೀರ್ತಿ ತಂದಿದ್ದಾರೆ.
ಈ ಕಲಾ ಕಾಲೇಜು ಜಾಗದ ಪ್ರತಿ ಇಂಚೂ ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತ. ಇಲ್ಲಿ ಅಧಿ ಕಾರಿಗಳ ವಸತಿ ಗೃಹ ಕಟ್ಟುವಂತಿಲ್ಲ. ಈ ಹಿಂದೆ ಅನಿಲ್ ಕುಮಾರ್ ಡಿಸಿ ಇದ್ದಾಗ, ಇದೇ ಕಾಲೇಜು ಆವರಣದಲ್ಲಿ 8 ಎಕರೆ ವಿಸ್ತೀರ್ಣ ದಲ್ಲಿ ಅಧಿಕಾರಿಗಳ ವಸತಿ ಗೃಹಗಳನ್ನು ಕಟ್ಟಲು ಹೊರಟಾಗ ಸಾರ್ವ ಜನಿಕ ಪ್ರತಿಭಟನೆ ನಡೆದವು. ಅಲ್ಲದೆ, ಕರ್ನಾಟಕ ಉಚ್ಛ ನ್ಯಾಯಾ ಲಯವು ಒಂದು ಸ್ಪಷ್ಟ ಆದೇಶ ನೀಡಿ, ಕಲಾ ಕಾಲೇಜು 24.27 ಪ್ರದೇಶದಲ್ಲಿ ಯಾವುದೇ ಅಧಿಕಾರಿಗಳ ವಸತಿ ಗೃಹ ನಿರ್ಮಾಣ ಮಾಡುವಂತಿಲ್ಲ ಎಂದು ತೀರ್ಪು ನೀಡಿದೆ.
ಈ ಎಲ್ಲವನ್ನೂ ಗಮನಿಸಿ ಸರ್ಕಾರ ಹಾಗೂ ಜಿಲ್ಲಾಧಿಕಾರಿ ಅವರು ವಸತಿ ಗೃಹ ನಿರ್ಮಾಣ ಕೈಬಿಡಬೇಕು ಎಂದು ಮನವಿ ಮಾಡುತ್ತೇನೆ.
– ಬಾ.ಮ. ಬಸವರಾಜಯ್ಯ.
ಈ ಮಧ್ಯ ಸರ್ಕಾರದ ಜನವರಿ 4, 2021ರ ಆದೇಶದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ವಸತಿ ಗೃಹಗಳ ನಿರ್ಮಾಣಕ್ಕೆ 4.31 ಎಕರೆ ಪ್ರದೇಶವನ್ನು ಮಂಜೂರು ಮಾಡಿ ಆದೇಶ ಹೊರಡಿಸಲಾಗಿದ್ದು, ಇದು ಕಾನೂನು ಬಾಹಿರ ಆಗಿದೆ ಎಂದರು.
ಹೀಗಾಗಿ, ದಾವಣಗೆರೆ ವಿಶ್ವವಿದ್ಯಾ ನಿಲಯ ದೃಶ್ಯಕಲಾ ಮಹಾವಿದ್ಯಾಲಯದ ಹೆಸರಿನಲ್ಲಿರುವ 4.31 ಎಕರೆ ಪ್ರದೇಶ ವನ್ನು ಜಿಲ್ಲಾಮಟ್ಟದ ಅಧಿಕಾರಿಗಳ ವಸತಿ ನಿಲಯಗಳ ನಿರ್ಮಾಣಕ್ಕೆ ಮಂಜೂರು ಮಾಡಿರುವುದನ್ನು ರದ್ದುಪ ಡಿಸುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಆದೇಶಿಸುವಂತೆ ಸಿಎಂ ಅವರಲ್ಲಿ ಮನವಿ ಮಾಡಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ದೃಶ್ಯಕಲಾ ಮಹಾವಿದ್ಯಾಲಯದ ಸಂರಕ್ಷಣಾ ಹೋರಾಟ ಸಮಿತಿ ಸದಸ್ಯರಾದ ಪ್ರೊ.ಸಿ.ಹೆಚ್. ಮುರುಗೇಂದ್ರಪ್ಪ, ಬಾ.ಮ. ಬಸವರಾಜಯ್ಯ, ಮಹಾಲಿಂಗಪ್ಪ, ವೈ. ಕುಮಾರ್ ಮತ್ತು ವಿದ್ಯಾರ್ಥಿ ಸಂಘಟನೆ ಮುಖಂಡರಿದ್ದರು.