ಕೊರೊನಾ : ಮನೆಯಲ್ಲಿಯೇ ನಮಾಜ್‍ಗೆ ತೀರ್ಮಾನ

ಬಿ.ಸಿಕಂದರ್‍


ದಾವಣಗೆರೆ, ಏ.23- ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ಪಾಸಿಟಿವ್‍ ಕೇಸ್‍ಗಳ ಸಂಖ್ಯೆ ಹಾಗೂ ಮಹಾಮಾರಿಯ ಮರಣ ಮೃದಂಗದಿಂದ ತತ್ತರಿಸಿರುವ ದೇಶದ ಜನತೆಯ ಪರಿಸ್ಥಿತಿಯನ್ನು ಮನ ಗಂಡು ಕೇಂದ್ರ ಸರ್ಕಾರದ ತೀರ್ಮಾನಕ್ಕೆ, ರಾಜ್ಯ ಸರ್ಕಾರದ ಆದೇಶದಂತೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಬದ್ಧವಾಗಿರುವ ಮುಸ್ಲಿಂ ಬಾಂಧವರು ಇಂದು ತುರ್ತು ಸಭೆ ನಡೆಸಿ ರಂಜಾನ್‍ ತಿಂಗಳ ಪ್ರಾರ್ಥನೆಯನ್ನು ಮನೆಯಲ್ಲಿಯೇ ಸಲ್ಲಿಸುವುದಾಗಿ ಸ್ವಯಂ ತೀರ್ಮಾನ ತೆಗೆದು ಕೊಂಡರು.

ವಕ್ಫ್‍ ಇಲಾಖೆಯ ಸುತ್ತೊಲೆಯಂತೆ ಮಸೀದಿಗಳಲ್ಲಿ 5 ಜನರನ್ನು ಹೊರತುಪಡಿಸಿ ಉಳಿದವರಿಗೆ ಅವಕಾಶ ನೀಡಬಾರದು, ಮನೆ ಯಲ್ಲೇ ಪ್ರಾರ್ಥನೆ ಸಲ್ಲಿಸಲು ಮಸೀದಿಗಳ ಮುಖ್ಯಸ್ಥರು ಸಮಾಜ ಬಾಂಧವರಿಗೆ ಸಲಹೆ ನೀಡಬೇಕೆಂದು ಪ್ರಸ್ತಾಪಿಸಲಾಯಿತು.

ಆಜಾದ್‌ ನಗರ, ಬಾಷಾನಗರ ಸೇರಿದಂತೆ ಆಜು-ಬಾಜಿನ ಪ್ರದೇಶದಲ್ಲಿ ನಿನ್ನೆ ರಾತ್ರಿ ಪ್ರದಕ್ಷಿಣೆ ಮಾಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು, ಇಮಾಂ ನಗರ (ಅರಳಿಮರ) ವೃತ್ತದ ಬಳಿ `ಜನತಾವಾಣಿ’ಯೊಂದಿಗೆ ಮಾತನಾಡಿದ ಡಿಸಿಯವರು, ಕರ್ಫ್ಯೂ ಜಾರಿ ಬಗ್ಗೆ ಪೊಲೀಸ್‍ ಇಲಾಖೆಯವರು ಧ್ವನಿವರ್ಧಕದಲ್ಲಿ ನಾಗರಿಕರಿಗೆ ಮನದಟ್ಟು ಮಾಡಿರುವುದರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ ಎಂದರು.

ವಕ್ಫ್‍ ಆದೇಶ; ಮಾತಿನ ಚಕಮಕಿ: ಸಂಜೆಯಾಗುತ್ತಿದ್ದಂತೆ ವಕ್ಫ್‍ ಇಲಾಖೆಯ ಆದೇಶದ ಪ್ರತಿಗಳು ನಗರದ ಮಸೀದಿಗಳಿಗೆ, ಮಸೀದಿ ಮುಖ್ಯದ್ವಾರಗಳಲ್ಲಿ ಪ್ರಕಟಿಸುತ್ತಿ ದಂತೆ ದಿಢೀರ್‍ ತೀರ್ಮಾನದ ಆದೇಶ  ನಮಾಜ್‍ಗೆ ಬರುವ ನಮಾಜಿಗಳು ಹಾಗೂ ಮಸೀದಿಯ ಮುಖ್ಯಸ್ಥರ ನಡುವೆ ಕೆಲವು ಮಸೀದಿಗಳಲ್ಲಿ ಮಾತಿನ ಚಕಮಕಿ ನಡೆಯಿತು.  ಇಸ್ಲಾಂ ಪೇಟೆಯಲ್ಲಿರುವ ಮಸೀದಿಗೆ ಸರ್ಕಾರದ ಆದೇಶ ಪ್ರತಿ ಗೇಟಿಗೆ ಹಾಕಿ ಬೀಗ ಹಾಕಿರು ವುದನ್ನು ಕಂಡ ಸಾರ್ವಜನಿಕರು, ಯಾವುದೇ ಸವಾಲು ಮಾಡದೆ ತಮ್ಮ ತಮ್ಮ ಮನೆಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಮುಂದಾದರು.

error: Content is protected !!