ಜಗಳೂರು ತಾಲ್ಲೂಕಿನಲ್ಲಿ ಬಿರುಗಾಳಿ ಸಹಿತ ಮಳೆ: 15 ಮನೆಗಳ ಕುಸಿತ

ಜಗಳೂರು, ಏ.23- ತಾ ಲ್ಲೂಕಿನಾದ್ಯಂತ ಇಂದು ಅಲ್ಲಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗಿದ್ದು ಅಪಾರ ಹಾನಿ ಉಂಟಾಗಿದೆ. 

ತಾಲ್ಲೂಕಿನ ತೊರೆಸಾಲು ಭಾಗದ ಸಿ.ಎಂ. ಹೊಳೆ, ಮಲ್ಲಾಪುರ, ದಿಬ್ಬದಹಳ್ಳಿ, ಕಮಂಡಲಗೊಂದಿ, ಹಾಲೇಹಳ್ಳಿ, ಸಾಲೇಹಳ್ಳಿ, ಹಿರೇಮಲ್ಲನಹೊಳೆ, ಹುಚ್ಚವ್ವನಹಳ್ಳಿ ಭಾಗದಲ್ಲಿ ಗುಡುಗು, ಬಿರುಗಾಳಿ ಸಹಿತ ಭಾರೀ ಮಳೆಗೆ ಮನೆ ಮೇಲಿನ ಶೀಟ್ ಹಾರಿ ಮರಗಳು, ವಿದ್ಯುತ್ ಕಂಬಗಳು ಧರೆಗೆ ಉರುಳಿವೆ.

ತಾಲ್ಲೂಕಿನ ತಾಯಿಟೋಣಿ ಗ್ರಾಮದಲ್ಲಿ ಆರು ಮನೆಗಳು ಕುಸಿದು, ಅಪಾರ ನಷ್ಟ ಉಂಟಾಗಿದೆ. ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಡಜನರು ಮನೆ ಕಳೆದುಕೊಂಡು ತೀವ್ರ ತೊಂದರೆಗೀಡಾಗಿದ್ದಾರೆ. ಗ್ರಾಮದಲ್ಲಿ ಹಲವೆಡೆ ಮರಗಳು ಉರುಳಿದ್ದು, ಒಂದೇ ದಿನದ ಮಳೆಗೆ ಗ್ರಾಮದ ಕೆರೆ ತುಂಬಿ ಕೋಡಿ ಬಿದ್ದಿದೆ ಎಂದು ಗ್ರಾಮದ ರೈತ ಮಾಧವರೆಡ್ಡಿ ತಿಳಿಸಿದ್ದಾರೆ.

error: Content is protected !!