ಕೋವಿಡ್ ಮಾರ್ಗಸೂಚಿ : ಹರಪನಹಳ್ಳಿ ತಾಲ್ಲೂಕಿನಲ್ಲಿ ಬಿಗಿ ಕ್ರಮ

ಹರಪನಹಳ್ಳಿ, ಏ.21- ತಾಲ್ಲೂಕಿನಲ್ಲಿ  ಬಿಗಿ ಕ್ರಮ ಕೈಗೊಳ್ಳಲು  ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ  ತಾಲ್ಲೂಕು ಆಡಳಿತದಿಂದ ನಡೆದ ವಿವಿಧ ವರ್ಗಗಳ ಮುಖಂಡರ ಸಭೆಯಲ್ಲಿ ತೀರ್ಮಾನಿಸಲಾಯಿತು.

ತಹಶೀಲ್ದಾರ್‌ ಎಲ್.ಎಂ. ನಂದೀಶ್ ಮಾತನಾಡಿ, ಎಲ್ಲಾ ಧಾರ್ಮಿಕ ಕೇಂದ್ರಗಳು ಬಂದ್ ಆಗಲಿವೆ. ಕಲ್ಯಾಣ ಮಂಟಪಕ್ಕೆ ಅನುಮತಿ ಪಡೆಯಬೇಕು ಎಂದು ತಿಳಿಸಿದರು. 

ಡಿವೈಎಸ್ಪಿ  ಹಾಲಮೂರ್ತಿರಾವ್ ಮಾತ ನಾಡಿ, ಬಟ್ಟೆ ಅಂಗಡಿ, ಜ್ಯೂಯಲರಿ ಷಾಪ್‌ ಗಳು ಬಂದ್ ಆಗಲಿವೆ. ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗಳಿಗೆ ಮಾತ್ರ ಅವಕಾಶವಿದೆ. ಫುಟ್‌ಪಾತ್ ಅಂಗಡಿಗಳು ಬಂದ್ ಆಗಲಿವೆ. ಕೃಷಿ ಚಟುವಟಿಕೆಗಳಿಗೆ, ಕಟ್ಟಡ ಕೆಲಸಗಳಿಗೆ  ಅವಕಾಶವಿದೆ ಎಂದು ಹೇಳಿದರು.

ಪುರಸಭಾ ಮುಖ್ಯಾಧಿಕಾರಿ ಬಿ.ಆರ್.ನಾಗರಾಜನಾಯ್ಕ ಮಾತನಾಡಿ,  ಪುರಸಭೆ ಹಿಂಭಾಗ ಪ್ರತಿದಿನ ನಡೆಯುವ ದಿನ ವಹಿ ಸಂತೆ ಹಾಗೂ ಶನಿವಾರ ನಡೆಯುವ ವಾರದ ಸಂತೆಯನ್ನು ಸ್ಟೇಡಿಯಂಗೆ ಸ್ಥಳಾಂತರ ಮಾಡಲಾಗುವುದು ಎಂದು ಹೇಳಿದರು.

ವೃತ್ತ ನಿರೀಕ್ಷಕ ನಾಗರಾಜ ಕಮ್ಮಾರ ಮಾತನಾಡಿದರು. ಪುರಸಭಾ ಅಧ್ಯಕ್ಷ ಮಂಜುನಾಥ್ ಇಜಂತಕರ್‌, ಸದಸ್ಯ ಕಿರಣಕುಮಾರ್ ಶಾನುಬಾಗ್, ಪಿಎಸ್‌ಐಗಳಾದ ಪ್ರಕಾಶ್‌, ಕಿರಣಕುಮಾರ್‌, ಪ್ರಶಾಂತ್‌ ಇತರರು ಪಾಲ್ಗೊಂಡಿದ್ದರು.

error: Content is protected !!