ರೈತರ ಹತ್ಯೆ ಖಂಡಿಸಿ ಹರಪನಹಳ್ಳಿಯಲ್ಲಿನ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಆಕ್ರೋಶ
ಹರಪನಹಳ್ಳಿ, ಅ.11- ಉತ್ತರ ಪ್ರದೇಶದ ಲಖೀಂಪುರದಲ್ಲಿ ಹೋರಾಟ ನಿರತ ರೈತರ ಮೇಲೆ ಕಾರು ಚಲಾಯಿಸಿ ರೈತರನ್ನು ಹತ್ಯೆ ಮಾಡಿರುವ ಘಟನೆ ನಡೆದಿದ್ದು, ಇದನ್ನು ಖಂಡಿಸಿ ತಾಲ್ಲೂಕಿನ ವಿವಿಧ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟ್ಟಣದಲ್ಲಿ ಇಂದು ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಲಾಯಿತು.
ಪಟ್ಟಣದ ಕಾಂಗ್ರೆಸ್ ಕಚೇರಿಯಿಂದ ಹೊರಟ ಮೆರವಣಿಗೆ ಹೊಸಪೇಟೆ ರಸ್ತೆ ಮೂಲಕ ಮಿನಿವಿಧಾನ ಸೌಧಕ್ಕೆ ಆಗಮಿಸಿ ಬಹಿರಂಗ ಸಭೆ ನಡೆಸಲಾಯಿತು.
ಪ್ರಿಯಾಂಕ ಗಾಂಧಿ ಅವರನ್ನು ಅಕ್ರಮವಾಗಿ ಬಂಧಿಸಿದ್ದ ಪೊಲೀಸರನ್ನು ಅಮಾನತ್ತುಗೊಳಿಸಬೇಕು ಹಾಗೂ ರೈತ ವಿರೋಧಿ ಯೋಗಿ ಸರ್ಕಾರವನ್ನು ವಜಾಗೊಳಿಸಬೇಕು ಎಂದು ರೈತರು ಆಗ್ರಹಿಸಿದರು.
ಕೇಂದ್ರ ಸಚಿವರ ಪುತ್ರನ ಕಾರು ಹಾಯ್ದು 6 ಜನ ರೈತರು ಹತ್ಯೆಗೀಡಾಗಿದ್ದು, ರೈತ ವಿರೋಧಿ ಬಿಜೆಪಿ ಸರ್ಕಾರ ತನ್ನ ವಿರುದ್ಧ ಧ್ವನಿ ಎತ್ತುತ್ತಿರುವ ರೈತರ ಉಸಿರನ್ನೇ ಅಡಗಿಸಿದೆ. ಇದು ಪ್ರಜಾಪ್ರಭುತ್ವದ ವಿರೋಧಿ ನಿಲುವಾಗಿದೆ ಎಂದು ಅವರು ಟೀಕಿಸಿದರು.
ಹತ್ಯೆಯಾದ ಪ್ರತಿಯೊಂದು ರೈತ ಕುಟುಂಬಗಳಿಗೆ 1 ಕೋಟಿ ರೂ. ಪರಿಹಾರ ನೀಡಬೇಕು ಹಾಗೂ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ರಾಜೀನಾಮೆಯನ್ನು ಕೂಡಲೇ ಪಡೆಯಬೇಕು ಎಂದು ಅವರು ಒತ್ತಾಯಿಸಿದರು.
ಬಳ್ಳಾರಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶಿವಯೋಗಿ, ಕೆಪಿಸಿಸಿ ಮಹಿಳಾ ಪ್ರಧಾನ ಕಾರ್ಯದರ್ಶಿ ಎಂ.ಪಿ. ಲತಾ, ವಿವಿಧ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬೇಲೂರು ಅಂಜಪ್ಪ, ಪ್ರೇಮಕುಮಾರ್, ಎಸ್. ಮಂಜು ನಾಥ್, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಟಿ. ಭರತ್, ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಎಂ.ಪಿ. ವೀಣಾ ಮಹಂತೇಶ್, ಮುಖಂಡರುಗಳಾದ ಎಂ.ಬಿ. ಯಶವಂತಗೌಡ, ಶಶಿಧರ ಪೂಜಾರ, ಎಚ್.ಬಿ. ಪರಶುರಾಮಪ್ಪ, ಡಾ. ಉಮೇಶ್ ಬಾಬು, ಕಾನಹಳ್ಳಿ ರುದ್ರಪ್ಪ, ಪ್ರಕಾಶ್ ಪಾಟೀಲ್, ಹುಲಿಕಟ್ಟಿ ಚಂದ್ರಪ್ಪ, ನೂರುದ್ದೀನ್, ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತೂರು ಬಸವರಾಜ, ಬಿ. ನಜೀರ್ ಸಾಬ್, ಮತ್ತಿಹಳ್ಳಿ ಅಜ್ಜಣ್ಣ, ನೀಲಗುಂದ ಬಿ. ವಾಗೀಶ್, ಅಗ್ರಹಾರ ಅಶೋಕ್, ಉದಯಶಂಕರ್, ಒ. ಮಹಂತೇಶ್, ಶೃಂಗಾರ ತೋಟ ಬಸವರಾಜ್, ರಿಯಾಜ್, ಎನ್. ಮಜೀದ್, ತಿಮ್ಮಲಾಪುರದ ನಾಗರಾಜ್, ಗಾಯಿತ್ರಮ್ಮ, ಕವಿತ ಸುರೇಶ್, ಕಡಕೋಳ್, ನೂರುದ್ದೀನ್ ಇನ್ನಿತರರಿದ್ದರು.