ದಾವಣಗೆರೆ, ಜು.10- ಹಿಂದಿನ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಬಾರದು ಮತ್ತು ಎರಡು ಡೋಸ್ ಉಚಿತ ಲಸಿಕೆ ಆಗುವವರೆಗೂ ಆಫ್ ಲೈನ್ ತರಗತಿ ಅಥವಾ ಪರೀಕ್ಷೆಗಳು ನಡೆಯಬಾರದು ಎಂಬ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ಕೂಗಿಗೆ ರಾಜ್ಯಾದ್ಯಂತ ಇಂದು ಪದವಿ, ಸ್ನಾತಕೋತ್ತರ, ಇಂಜಿನಿಯರಿಂಗ್, ಡಿಪ್ಲೋಮಾ ಹಾಗೂ ಫಾರ್ಮಸಿ ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ಆನ್‍ಲೈನ್ ತರಗತಿ ಬಹಿಷ್ಕರಿಸಿದ್ದಾರೆ. ಅಂತೆಯೇ ಜಿಲ್ಲೆಯಲ್ಲೂ ಸಹ ಹಲವಾರು ವಿದ್ಯಾರ್ಥಿಗಳು ಆನ್ಲೈನ್ ತರಗತಿ ಯನ್ನು ಬಹಿಷ್ಕರಿಸಿ ಎಸ್‍ಜೆವಿಪಿ, ಡಿಆರ್‍ಆರ್ ಪಾಲಿಟೆಕ್ನಿಕ್, ಬಾಪೂಜಿ ಕಾಲೇಜ್, ಹರಿಹರ ಪಾಲಿಟೆಕ್ನಿಕ್, ಸ್ನಾತಕೋತ್ತರದ ಹಲವು ವಿದ್ಯಾ ರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಬೆಂಗಳೂರಿನ ನೂರಾರು ಕಾಲೇಜುಗಳಿಂದ ವಿದ್ಯಾರ್ಥಿಗಳು ತರಗತಿ ಬಹಿಷ್ಕಾರ ಮಾಡಿದ್ದಾರೆ. ರಾಜ್ಯದಲ್ಲಿಯೂ ಇತರೆ ಜಿಲ್ಲೆಗಳಲ್ಲಿ ಹಲವು ಪ್ರತಿಷ್ಠಿತ ವಿವಿ ಹಾಗೂ ಕಾಲೇಜುಗಳು ನೂರಾರು ಸಂಖ್ಯೆಯಲ್ಲಿ ಬಂದ್ ಆಗಿವೆ.
ಗುಲ್ಬರ್ಗಾ ವಿವಿ ಅಡಿಯಲ್ಲಿ ಬರುವ ಕಾಲೇಜು ಗಳು, ಬಳ್ಳಾರಿಯ ಶ್ರೀಕೃಷ್ಣ ದೇವರಾಯ ವಿವಿ, ಧಾರವಾಡ ವಿವಿ, ಬಿಜಾಪುರ ವಿವಿ ಇವು ಸಂಪೂರ್ಣ ಆನ್ ಲೈನ್ ತರಗತಿ ಬಹಿಷ್ಕಾರಕ್ಕೆ ಸಾಕ್ಷಿಯಾಗಿವೆ ಎಂದು ಎಐಡಿಎಸ್‍ಓ ಜಿಲ್ಲಾ ಕಾರ್ಯದರ್ಶಿ ಎನ್. ಪೂಜಾ ತಿಳಿಸಿದ್ದಾರೆ.