ಜನತಾ ಕರ್ಫ್ಯೂ : ನಿರಂತರ ಅನ್ನ ದಾಸೋಹದಲ್ಲಿ ಸ್ಫೂರ್ತಿ ಸೇವಾ ಟ್ರಸ್ಟ್

ಸತತ 42 ದಿನಗಳಿಂದಲೂ ಅಗತ್ಯತೆಯುಳ್ಳವರಿಗೆ ಪ್ರತಿದಿನ 2 ಟನ್ ಊಟ ಬಡಿಸುತ್ತಿರುವ ದಾನಿಗಳ ಅನ್ನದ ಸೇವೆ ಇನ್ನೂ ಮುಂದುವರಿಕೆ

ವಿಶ್ವದ ಹಲವು ರಾಷ್ಟ್ರಗಳಲ್ಲಿ ಪಸರಿಸಿರುವ `ಕೊರೊನಾ ವೈರಸ್’ ಜಾಗತಿಕವಾಗಿ ತೀವ್ರ ಆತಂಕ ಮೂಡಿಸಿರುವ ಆರೋಗ್ಯ ಸಮಸ್ಯೆ. ಇದು, ಸೋಂಕಿತ ರೋಗವಾಗಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಇಡೀ ಭಾರತ ದೇಶವೇ  ಜನತಾ ಕರ್ಫ್ಯೂನಲ್ಲಿದೆ. 

ಲಾಕ್ ಡೌನ್ ಆದ ಪರಿಣಾಮ ಬಡವರು, ಕಡು ಬಡವರು, ಕಾರ್ಮಿಕರು, ದಿನಗೂಲಿ ಕಾರ್ಮಿಕರು ಆಹಾರವಿಲ್ಲದೇ ಪರದಾಡುತ್ತಿರುವುದು ಒಂದು ಕಡೆಯಾದರೆ, ಊಟದ ಕಡೆ ಗಮನ ಹರಿಸದೇ ಪೊಲೀಸರು, ಆರೋಗ್ಯ ಸೇವಕರು ಜನರಿಗೆ ಅಗತ್ಯ ಸೇವೆ ಒದಗಿಸುವಲ್ಲಿ ನಿರತರಾಗಿರುವುದು ಮತ್ತೊಂದೆಡೆ. ಇವರಿಗೆಲ್ಲಾ ಆಹಾರ ಒದಗಿಸುವಲ್ಲಿ ಕೊಡುಗೈ ದಾನಿಗಳ ನಗರ ಎಂದೇ ಹೆಸರಾದ ದಾವಣಗೆರೆಯಲ್ಲಿ ದಾನಿಗಳು ನಾ ಮುಂದೆ – ತಾ ಮುಂದೆ ಎನ್ನುತ್ತಿದ್ದಾರೆ.

ಇಂತಹ ಅನೇಕ ದಾನಿಗಳು ಮತ್ತು ಸಮಾಜ ಸೇವಕರಲ್ಲಿ ಬಿ.ಸತ್ಯನಾರಾಯಣ ಮೂರ್ತಿ ರೆಡ್ಡಿ ಮತ್ತು ಅವರ ಸ್ನೇಹ ಬಳಗ ಪ್ರಮುಖ ಪಾತ್ರ ವಹಿಸಿದೆ. ಈ ಬಳಗದ ಸೇವೆ ಕೇವಲ ಒಂದು ದಿನದ್ದಲ್ಲ ; ಲಾಕ್ ಡೌನ್ ಆದಾಗಿ ನಿಂದಲೂ ಆರಂಭವಾಗಿದ್ದು, ಇಂದೂ ಕೂಡಾ ಮುಂದು ವರೆದಿದೆ. ಲಾಕ್ ಡೌನ್ ಮುಗಿಯುವ ತನಕವೂ ತಮ್ಮ ಸೇವೆ ಸಂಕಷ್ಟದಲ್ಲಿರುವ ಜನರಿಗಾಗಿಯೇ ನಿರಂತರ ವಾಗಿರುತ್ತದೆ ಎನ್ನುತ್ತಾರೆ ಸತ್ಯನಾರಾಯಣ ರೆಡ್ಡಿ.

ಅನ್ನ ದಾನ : ದಾನಗಳಲ್ಲೇ ಮಹಾದಾನ `ಅನ್ನ ದಾನ’. ಎಲ್ಲಾ ದಾನಗಳಿಗಿಂತಲೂ ಅನ್ನ ದಾನ ಶ್ರೇಷ್ಠಾತಿ ಶ್ರೇಷ್ಠ. ದಾನ ಮಾಡುವುದಕ್ಕೆ ಸಾಕಷ್ಟು ಅವಕಾಶಗಳು ಸಿಗುತ್ತವೆ. ಆದರೆ, ಅನ್ನ ದಾನ ಮಾಡುವುದಕ್ಕೆ ಸಿಗುವ ಅವಕಾಶಗಳು ಅಷ್ಟಕ್ಕಷ್ಟೇ. ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಜಾಣತನ ಮುಖ್ಯ. 

ಸತ್ಯನಾರಾಯಣ ರೆಡ್ಡಿ ಮತ್ತು ಅವರ ಸ್ನೇಹ ಬಳಗ ಅನ್ನ ದಾಸೋಹದ ವ್ಯವಸ್ಥೆಯನ್ನು ತುಂಬಾ ಅಚ್ಚುಕಟ್ಟಾಗಿ ಮಾಡುವಲ್ಲಿ ಯಶಸ್ವಿಯಾಗುತ್ತಿದೆ. ಒಂದು ಅಗಳೂ ವ್ಯರ್ಥವಾಗದಂತೆ ಸಂಕಷ್ಟದಲ್ಲಿರುವವರಿಗೆ ತಲುಪಿ ಸುವಲ್ಲಿ ಮುತುವರ್ಜಿ ವಹಿಸಿದೆ.

ಸತ್ಯನಾರಾಯಣ ಮೂರ್ತಿ ಅವರು ದಾನಿಗಳ ಮತ್ತು ಸ್ನೇಹಿತರ ಸಹಕಾರದೊಂದಿಗೆ ಮಾರ್ಚ್ 28 ರಂದು ಲಾಕ್ ಡೌನ್ ಘೋಷಣೆಯಾದಾಗಿನಿಂದ ಅನ್ನ ದಾಸೋಹ ನಡೆಸುತ್ತಿದ್ದು, ಪ್ರತಿ ದಿನವೂ ಅಗತ್ಯತೆಯುಳ್ಳ ಸುಮಾರು ಎರಡರಿಂದ ಎರಡೂವರೆ ಸಾವಿರ ಜನರಿಗೆ ವಿತರಿಸಲಾಗುತ್ತಿದೆ.

ಎಂ.ಸಿ.ಸಿ. `ಎ’ ಬ್ಲಾಕ್ ನಲ್ಲಿರುವ ಸತ್ಯನಾರಾಯಣ ಮೂರ್ತಿ ಅವರ ನಿವಾಸದ ಮುಂದಿನ ವಠಾರದಲ್ಲಿ ಪ್ರತಿ ದಿನವೂ ಮಧ್ಯರಾತ್ರಿ 2 ಗಂಟೆ ವೇಳೆಗೆ ಬಾಣಸಿಗರು ಆಹಾರ ಪದಾರ್ಥಗಳನ್ನು ಸಿದ್ಧಪಡಿಸುವ ಕಾರ್ಯ ಆರಂಭಿಸುವ ದೃಶ್ಯ ನೋಡಿ ದಾಗ, ಒಂದು ರೀತಿಯಲ್ಲಿ ಮದುವೆ ಮನೆಯಲ್ಲಿನ ಅಡುಗೆ ಮಾಡುವ ಸಂಭ್ರಮದಂತೆ ಕಂಡು ಬರುತ್ತದೆ.

ಪ್ರತಿದಿನ ಸುಮಾರು 2 ಕ್ವಿಂಟಾಲ್ ನಷ್ಟು ಆಹಾರಗಳನ್ನು ಮಾಡಲಾಗುತ್ತದೆ. ಸಿದ್ಧಗೊಂಡ ಆಹಾರ ಪದಾರ್ಥಗಳನ್ನು ಪ್ಯಾಕೆಟ್ ಮಾಡುವಷ್ಟೊತ್ತಿಗೆ  ಬೆಳಿಗ್ಗೆ
9 ಗಂಟೆಯಾಗುತ್ತದೆ. ನಂತರ ಮಧ್ಯಾಹ್ನ 2 ಗಂಟೆವರೆಗೂ ಅಗತ್ಯತೆ ಯುಳ್ಳವರನ್ನು ಹುಡುಕಿ ಕೊಂಡು ಹೋಗಿ ವಿತರಿಸಲಾಗುತ್ತದೆ. ಸಿ.ಜಿ. ಆಸ್ಪತ್ರೆ, ಹಳೆ ಹೆರಿಗೆ ಆಸ್ಪತ್ರೆಗಳಲ್ಲಿನ ರೋಗಿಗಳು ಮತ್ತು ಅವರ ಸಹಾಯ ಕರಿಗೆ, ಪೌರ ಕಾರ್ಮಿಕರಿಗೆ, ಬೇತೂರು ರಸ್ತೆ, ಬೈಪಾಸ್ ರಸ್ತೆ, ಗಂಗಾ ನಗರ, ನಿಟುವಳ್ಳಿ, ಪಾಮೇನ ಹಳ್ಳಿ ಚಾನಲ್ ಹತ್ತಿರ, ಶಾಮನೂರು ರಸ್ತೆ, ಲೋಕಿಕೆರೆ ರಸ್ತೆ, ಹಳೇ ಪಿ.ಬಿ.ರಸ್ತೆಗಳಲ್ಲಿರುವ ಸಂಕಷ್ಟಕ್ಕೊ ಳಗಾದ ಜನರಿಗೆ  ನೀಡಲಾಗುತ್ತಿದೆ.  ಅಗತ್ಯ ಸೇವೆ ಒದಗಿಸುತ್ತಿರುವ ಪೊಲೀಸರಿಗೆ, ಆರೋಗ್ಯ ಇಲಾಖೆ ಕಾರ್ಯಕರ್ತ ರಿಗೂ ಊಟ ಪೂರೈಸಲಾಗುತ್ತಿದೆ.

ಸಂದೀಪ್ ನರ್ಸಿಂಗ್ ಹೋಂನ ಡಾ. ಹೆಚ್.ಎನ್.ಮಲ್ಲಿಕಾರ್ಜುನ್ ಮತ್ತು ಅವರ ಧರ್ಮಪತ್ನಿ ಶ್ರೀಮತಿ ಪುಷ್ಪಾ ದಂಪತಿ ಸೇರಿದಂತೆ ಹಲವಾರು ದಾನಿಗಳು ತಾವೊಬ್ಬ ವೈದ್ಯರು ; ತಾವು ದಾನವಂತರು ಎಂಬುದನ್ನು ಮರೆತು, ಸಾಮಾನ್ಯರಲ್ಲಿ ಸಾಮಾನ್ಯ ರಾಗಿ ಅನ್ನ ದಾಸೋಹದ ಸಿದ್ಧತೆಗೆ ಸ್ವತಃ ಕೆಲಸ ಮಾಡುವುದರ  ಮೂಲಕ ಸ್ಫೂರ್ತಿ ಸೇವಾ ಟ್ರಸ್ಟ್ ನ ಸಾಮಾಜಿಕ ಸೇವೆಗೆ ಕೈ ಜೋಡಿಸುವುದರೊಂದಿಗೆ ಮಾದರಿಯಾಗಿದ್ದಾರೆ.

ಇ.ಎಂ. ಮಂಜುನಾಥ
9448277772
[email protected]

error: Content is protected !!