ಹರಪನಹಳ್ಳಿ, ಅ.8- ಉತ್ತರ ಪ್ರದೇಶದ ಲಖೀಂಪುರ್‍ದಲ್ಲಿ ಹೋರಾಟ ನಿರತ ರೈತರ ಮೇಲೆ ಕಾರು ಚಲಾಯಿಸಿ, ರೈತರನ್ನು ಹತ್ಯೆ ಮಾಡಿರುವ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗ ಆಶೀಶ್ ಮಿಶ್ರಾ ಬಂಧನವಾಗಬೇಕು. ಪ್ರಿಯಾಂಕಾ ಗಾಂಧಿ ಅವರನ್ನು ಅಕ್ರಮವಾಗಿ ಬಂಧಿಸಿದ ಪೊಲೀಸರನ್ನು ಅಮಾನತ್ತುಗೊಳಿಸುವಂತೆ ಆಗ್ರಹಿಸಿ, ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಮಾತನಾಡಿ, ರೈತ ವಿರೋಧಿ ಬಿಜೆಪಿ ಸರ್ಕಾರ ತನ್ನ ವಿರುದ್ಧ ಧ್ವನಿ ಎತ್ತುತ್ತಿರುವ ರೈತರ ಉಸಿರನ್ನೇ ಅಡಗಿಸಿದೆ. ಇದು ಪ್ರಜಾಪ್ರಭುತ್ವ ವಿರೋಧಿ ನಿಲುವಾಗಿದ್ದು, ಯೋಗಿ ಆದಿತ್ಯನಾಥ ನೇತೃತ್ವದ ಉತ್ತರ ಪ್ರದೇಶ ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ಆಕ್ರೋಶ ವ್ಯಕ್ತಪಡಿಸಿದರು.
ಪುರಸಭೆ ಸದಸ್ಯರುಗಳಾದ ಎಂ.ವಿ. ಅಂಜಿನಪ್ಪ, ಟಿ. ವೆಂಕಟೇಶ್, ಲಾಟಿ ದಾದಾಪೀರ್, ಪೈಲ್ವಾನ್ ಗಣೇಶ್, ಮುಖಂಡರಾದ ಕೆ.ಎಂ. ಬಸವರಾಜಯ್ಯ, ಎಚ್.ವಸಂತಪ್ಪ, ಮಹಿಳಾ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷೆ ಪುಪ್ಪಾ ದಿವಾಕರ್, ತಾ.ಪಂ. ಮಾಜಿ ಸದಸ್ಯೆ ಕಂಚೀಕೆರೆ ಜಯಲಕ್ಷ್ಮಿ, ಸಹನಾ ನಾಗರಾಜ್, ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತೂರು ಬಸವರಾಜ್, ಚಿಗಟೇರಿ ಯುವ ಕಾಂಗ್ರೆಸ್ ಅಧ್ಯಕ್ಷ ಹೆಚ್. ಶಿವರಾಜ್, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ರಿಯಾಜ್, ತಿಮ್ಮಲಾಪುರ ಈಶ್ವರ್, ಬೂದಿ ಹಾಳ್ ಸಿದ್ದೇಶಪ್ಪ, ಕುಂಚೂರು ಸಂಜೀವಪ್ಪ, ಕಂಚಿಕೇರಿ ಕೆಂಚಪ್ಪ, ಕುಂಚೂರು ಇಬ್ರಾಹಿಂ, ಜಾಫರ್‍ಸಾ ಬ್, ಗುಂಡಗತ್ತಿ ನೇತ್ರಾವತಿ, ಕವಿತಾ ಸುರೇಶ್, ರತ್ನಮ್ಮ ಸೋಮಪ್ಪ, ಭೋವಿ ರೇಣುಕಮ್ಮ, ಕಂಚಿಕೇರಿ ಗ್ರಾ.ಪಂ. ಅಧ್ಯಕ್ಷೆ ವೈ. ಹನುಮಂತಮ್ಮ ಗಣೇಶ್, ಅಡವಿಹಳ್ಳಿ ಗ್ರಾ.ಪಂ. ಅಧ್ಯಕ್ಷ ತಿಮ್ಮಪ್ಪ, ಹಲುವಾಗಲು ಗ್ರಾ.ಪಂ. ಉಪಾಧ್ಯಕ್ಷೆ ಶೃತಿ, ಪೋತಲಕಟ್ಟೆ ತಿಮ್ಮಪ್ಪ, ನಿಟ್ಟೂರು ಹನುಮಂತ, ಶಿವಪುತ್ರ, ಗೌರಿಪುರ ನಾರಾಯಣ ಗೌಡ, ಶಿವಮೂರ್ತಯ್ಯ, ಮಾಡ್ಲಿಗೇರಿ ಹನುಮಂತ, ತಾಜ್‍ಪೀರ್, ತಿಪ್ಪನಾಯಕನಹಳ್ಳಿ ಆನಂದ್, ಪಕ್ಕೀರಪ್ಪ ಇನ್ನಿತರರು ಪಾಲ್ಗೊಂಡಿದ್ದರು.