ದಾವಣಗೆರೆ, ಫೆ.19- ಮಹಾನಗರ ಪಾಲಿಕೆ ವತಿಯಿಂದ ಹಮ್ಮಿಕೊಂಡಿದ್ದ ಮನೆ ಬಾಗಿಲಿಗೆ ಪಾಲಿಕೆ ಕಾರ್ಯಕ್ರಮದ ಸಮಾರೋಪ ಸಮಾರಂಭವು ನಾಳೆ ದಿನಾಂಕ 20ರ ಭಾನುವಾರ ಸಂಜೆ ನಡೆಯಲಿದೆ ಎಂದು ಪಾಲಿಕೆ ಮೇಯರ್ ಬಿ.ಜಿ. ಅಜಯ್ ಕುಮಾರ್ ಹೇಳಿದ್ದಾರೆ.
ಪಾಲಿಕೆಯ ತಮ್ಮ ಕಚೇರಿಯಲ್ಲಿ ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದ ಅವರು, ನಮ್ಮ ಕಾರ್ಯಕ್ರಮಕ್ಕೆ ಅತೀವ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಹೇಳಿದರು.
17 ಮತ್ತು 24ನೇ ವಾರ್ಡ್‌ನ ಕಾರ್ಯಕ್ರಮವು ನಾಳೆ ದಿನಾಂಕ 20 ರಂದು ನಡೆಯಲಿದ್ದು, ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ, ಸಚಿವ ಹರ್ ದೀಪ್ ಸಿಂಗ್ ಪುರಿ ಸಹ ದೂರವಾಣಿ ಕರೆ ಮಾಡಿ ಪ್ರಶಂಸೆ ವ್ಯಕ್ತಪಡಿಸಿರುವುದಾಗಿ ಮೇಯರ್ ಹೇಳಿದರು.
32ನೇ ವಾರ್ಡ್‌ನ ಉಮಾ ಪ್ರಕಾಶ್ ಮತ್ತು 35ನೇ ವಾರ್ಡ್‌ನ ಸದಸ್ಯರಾದ ಸವಿತಾ ಗಣೇಶ್ ಅವರು ಕಾರ್ಯಕ್ರಮ ನಡೆಸಲು ಆಸಕ್ತಿ ತೋರದ ಕಾರಣ ಅಲ್ಲಿ ಕಾರ್ಯಕ್ರಮ ನಡೆಸಿಲ್ಲ. ಉಳಿದಂತೆ ಈಗಾಗಲೇ 41 ವಾರ್ಡ್‌ಗಳಲ್ಲಿ ಈ ಕಾರ್ಯಕ್ರಮ ಮುಗಿದಿದೆ ಎಂದು ತಿಳಿಸಿದರು.
ಮನೆ ಬಾಗಿಲಿಗೆ ಮಹಾನಗರ ಪಾಲಿಕೆ ಕಾರ್ಯಕ್ರಮಕ್ಕಾಗಿ ಸುಮಾರು 9 ಲಕ್ಷ ರೂ. ವೆಚ್ಚವಾಗಿದೆ ಎಂದವರು ವಿವರಿಸಿದರು.
ಕಾರ್ಯಕ್ರಮದಿಂದ ಆದ ಲಾಭಗಳು
ಆಸ್ತಿ ತೆರಿಗೆ ಮತ್ತು ನೀರಿನ ದರದಿಂದ 1.45 ಕೋಟಿ ರೂ.ಸಂಗ್ರಹವಾಗಿದೆ. 344 ಉದ್ದಿಮೆಗಳಿಗೆ ಪರವಾನಗಿ ನೀಡಲಾಗಿದೆ. 4.59 ಲಕ್ಷ ರೂ.ಸಂಗ್ರಹವಾಗಿದೆ.
490 ಜನನ–ಮರಣ ಪ್ರಮಾಣ ಪತ್ರಗಳನ್ನು ಸ್ಥಳದಲ್ಲೇ ವಿತರಣೆ ಮಾಡಲಾಗಿದೆ. 21 ಕಟ್ಟಡ ಪರವಾನಗಿ ನೀಡಲಾಗಿದೆ. 344 ಟ್ರೇಡ್ ಲೈಸನ್ಸ್ ನೀಡಲಾಗಿದೆ. ಎಂಜಿನಿಯರಿಂಗ್ ಶಾಖೆಗೆ 206, ಆಶ್ರಯ ಶಾಖೆಗೆ 95, ಆರೋಗ್ಯ ಶಾಖೆಗೆ 38, ವಿದ್ಯುತ್ ಶಾಖೆಗೆ 286, ಕಂದಾಯ ಶಾಖೆಗೆ 17 ದೂರು ಗಳು ಬಂದಿದ್ದವು. ಶೇ 60ರಷ್ಟು ಪ್ರಕರ
ಣಗಳನ್ನು ಇತ್ಯರ್ಥಗೊಳಿಸಲಾಗಿದೆ. 1950ರಲ್ಲಿ ಮೃತಪಟ್ಟಿದ್ದ ಭಾರತ್ ಕಾಲೋನಿಯ ಸಿದ್ಧವೀರಪ್ಪ ತಂದೆ ವಿರಾಟಪ್ಪ ಎನ್ನುವವರ ಮರಣ ಪ್ರಮಾಣ
ಪತ್ರವನ್ನು ನೀಡುವ ಮೂಲಕ ಈ ಕಾರ್ಯಕ್ರಮ ದಾಖಲೆ ನಿರ್ಮಿಸಿದೆ.