ಹೊಸ ಹೊಸ ಸವಾಲುಗಳನ್ನು ಸ್ವೀಕರಿಸಲು ತಯಾರಾಗಬೇಕು

ದಾವಣಗೆರೆ, ಫೆ.19- ಎ.ಆರ್.ಜಿ. ಕಾಲೇಜಿನ ಹಳೆ ವಿದ್ಯಾರ್ಥಿಗಳ ಹಾಗೂ ಹೊಸ ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. 1975-78 ನೇ ಸಾಲಿನ ವಿದ್ಯಾರ್ಥಿಗಳಾದ ಡಾ. ಶೇಖರ್ ಎಸ್. ಅಯ್ಯರ್ ಮತ್ತು ಪಿ.ಎಸ್. ಸುಧೀಂದ್ರ ರಾವ್ ಅವರು 2020-21ನೇ ಸಾಲಿನ `ಪುನಶ್ಚೇತನ ಹಾಗೂ ಪ್ರೇರಣೆ’ ಎಂಬ ಕಾರ್ಯಕ್ರಮದ ಅಡಿಯಲ್ಲಿ ವಿದ್ಯಾರ್ಥಿಗಳ ಸಬಲೀಕರಣಕ್ಕಾಗಿ ಮಾತನಾಡಿದರು.

ಡಾ. ಶೇಖರ್ ಎಸ್. ಅಯ್ಯರ್‌, ತಮ್ಮ ವಿದ್ಯಾರ್ಥಿ ಜೀವನದ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾ `ಮೀಟಿಂಗ್ ಕಾರ್ಪೊರೇಟ್ ಎಕ್ಸ್‍ಪೆಕ್ಟೇಷನ್’ ಎಂಬ ವಿಷಯ ಕುರಿತು ಮಾತನಾಡುತ್ತಾ, 

ಇಂದಿನ ವಿದ್ಯಾರ್ಥಿಗಳು ಜಾಗತಿಕ ಸ್ಪರ್ಧಾತ್ಮಕ ಸವಾಲುಗಳನ್ನು ಎದುರಿಸಿ ಉದ್ಯೋಗ ಮಾರುಕಟ್ಟೆಯಲ್ಲಿ ನಿರೀಕ್ಷಿತ ಉದ್ಯೋಗಗಳನ್ನು ಪಡೆಯಲು ಬೇಕಾದ ನೈಪುಣ್ಯತೆ, ಸಮಯ ಪ್ರಜ್ಞೆ, ಶಿಸ್ತು, ವಿಷಯಾಧಾರಿತ ಜ್ಞಾನದ ಜೊತೆಗೆ ಸಂವಹನ ಕೌಶಲ್ಯಗಳು, ಜೀವನ ಮತ್ತು ಸಾಮಾಜಿಕ ಮೌಲ್ಯಗಳನ್ನು ಬೆಳೆಸಿಕೊಂಡು, ಉದ್ಯೋಗ ಆಯ್ಕೆಗೆ ಬೇಕಾಗಿರುವ ಮಾನದಂಡಗಳನ್ನು ರೂಡಿಸಿಕೊಳ್ಳಬೇಕೆಂದು ಕರೆಕೊಟ್ಟರು ಹಾಗೂ ಮಾನಸಿಕ ಸಾಮರ್ಥ್ಯ, ತಂತ್ರಜ್ಞಾನದ ಅವಶ್ಯಕತೆ, ಸಂಯಮ ಮತ್ತು ಜ್ಞಾನ ವೃದ್ಧಿಯ ಮಹತ್ವವನ್ನು ತಿಳಿಸಿ ಹೇಳಿದರಲ್ಲದೆ ವಿದ್ಯಾರ್ಥಿಗಳು ಹೊಸ ಹೊಸ ಪರಿಕಲ್ಪನೆಗಳನ್ನು ರೂಢಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಸಂಯೋಜಕರಲ್ಲಿ ಮತ್ತೊಬ್ಬರಾದ ಪಿ.ಎಸ್. ಸುಧೀಂದ್ರ ರಾವ್ ವಿದ್ಯಾರ್ಥಿಗಳು ಸದಾ ಹೊಸ ಹೊಸ ಸವಾಲುಗಳನ್ನು ಸ್ವೀಕರಿಸಲು ತಯಾರಾಗಬೇಕೆಂದು ಹೇಳುತ್ತಾ, ವ್ಯಕ್ತಿತ್ವ ಪರೀಕ್ಷೆಗಳಾದ ಸಾಮರ್ಥ್ಯ, ನ್ಯೂನತೆ, ಅವಕಾಶ ಹಾಗೂ ಸವಾಲುಗಳನ್ನು ಅರಿತು ಸ್ವಂತ ಉದ್ದಿಮೆ ಆರಂಭಿಸುವ ಮುಕ್ತ ಆಲೋಚನೆ ರೂಡಿಸಿಕೊಳ್ಳಬೇಕೆಂದರು. ಅವಕಾಶ ಮತ್ತು ಬೆಳವಣಿಗೆಗಳ ಮುನ್ನೋಟ ಬೆಳೆಸಿಕೊಳ್ಳಬೇಕೆಂದರಲ್ಲದೇ ಈಗಾಗಲೇ ವಿವಿಧ ಕ್ಷೇತ್ರಗಳಲ್ಲಿ ಯಶಸ್ವಿಯಾದ ಮಹನೀ ಯರುಗಳ ಉದಾಹರಣೆ ಕೊಡುತ್ತಾ ವಿದ್ಯಾರ್ಥಿಗಳನ್ನು ವಿವಿಧ ರೀತಿಯಲ್ಲಿ ಆಲೋಚಿಸುವಂತೆ ಪ್ರೇರೇಪಿಸಿದರು. ಕಾರ್ಯಕ್ರಮವನ್ನು ಮಧುಕುಮಾರ್ ನಿರ್ವಹಿಸಿದರು.

error: Content is protected !!