ಜಮೀನು ದೊರೆತರೆ ಬಾಲಭವನ ಚಟುವಟಿಕೆ ವಿಸ್ತರಣೆ : ಚಿಕ್ಕಮ್ಮ

ದಾವಣಗೆರೆ, ಜ. 17- ಜಿಲ್ಲೆಯಾದ್ಯಂತ ಬರುವ ಎಲ್ಲಾ ತಾಲ್ಲೂಕುಗಳಲ್ಲಿ ಬಾಲಭವನಗಳನ್ನು ನಿರ್ಮಿಸಲು ಜಮೀನಿನ ಅವಶ್ಯಕತೆ ಇದ್ದು, ಜಿಲ್ಲಾಡಳಿತದಿಂದ ಬಾಲಭವನದ ಹೆಸರಿಗೆ ಜಮೀನು ಮಂಜೂರು ಮಾಡಿದ್ದಲ್ಲಿ, ಭವನದ ಚಟುವಟಿಕೆಗಳನ್ನು ತಾಲ್ಲೂಕುವಾರು ವಿಸ್ತರಣೆ ಮಾಡಲಾಗುವುದು ಎಂದು ರಾಜ್ಯ ಬಾಲ ಭವನ ಸೊಸೈಟಿಯ ಅಧ್ಯಕ್ಷೆ ಚಿಕ್ಕಮ್ಮ ಬಸವರಾಜ್ ಮನವಿ ಮಾಡಿದ್ದಾರೆ.

ಜಿಲ್ಲಾ ಬಾಲಭವನವು ದಾವಣಗೆರೆ, ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 2004 ರಿಂದ ಜೆ.ಹೆಚ್. ಪಟೇಲ್ ಬಡಾವಣೆಯಲ್ಲಿರುವ ಉದ್ಯಾನವನ-1ರಲ್ಲಿ 15,675 ಚ.ಮೀ. ಹಾಗೂ ಉದ್ಯಾನವನ-6ರ ಲ್ಲಿ 16,500 ಚ.ಮೀ. ವಿಸ್ತೀರ್ಣದ ಜಮೀನನ್ನು ಬಾಲ ಭವನದ ಹೆಸರಿಗೆ ಮಂಜೂರಾಗಿರುತ್ತದೆ. ಈಗಾಗಲೇ ರಾಜ್ಯ ಬಾಲ ಭವನದಿಂದ ವಿವಿಧ ಅಭಿವೃದ್ಧಿಗಾಗಿ ರೂ.43.81 ಲಕ್ಷ ಹಾಗೂ ಮಕ್ಕಳ ಪುಟಾಣಿ ರೈಲು ಅಳವಡಿಸಲು 102.36 ಲಕ್ಷ ರೂ.ಗಳನ್ನು ಹಾಗೂ ಮಕ್ಕಳ ಆಟಿಕೆಗಳ ಅಳವಡಿಕೆಗಾಗಿ ಒಟ್ಟು 15 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.

ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆ ಯಲ್ಲಿ ಭವನದ ಸರ್ವತೋಮುಖ ಅಭಿವೃದ್ಧಿ ಗಾಗಿ ಹೆಚ್ಚಿನ ಅನುದಾನವನ್ನು, ಸೌಲಭ್ಯ ಗಳನ್ನು ಪಡೆಯುವ ಮಕ್ಕಳ ಅನುಕೂಲಕ್ಕಾಗಿ ಶೌಚಾಲಯ ವ್ಯವಸ್ಥೆ, ಪಾರ್ಕ್ ಅಭಿವೃದ್ಧಿ ಹಾಗೂ ಮಕ್ಕಳಿಗೆ ಅನುಕೂಲವಾಗುವಂತೆ ಅತ್ಯಾಧುನಿಕ ರೀತಿಯ ಆಟಿಕೆಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲು ಉದ್ದೇಶಿಸ ಲಾಗಿದೆ ಎಂದು ಅವರು ತಿಳಿಸಿದ್ದಾರೆ.

error: Content is protected !!