ದಾವಣಗೆರೆ, ಫೆ. 17 – ರಿಟ್ ಅರ್ಜಿಗಳ ಪ್ರಕರಣದಲ್ಲಿ ಉಚ್ಚ ನ್ಯಾಯಾಲಯ ನಿನ್ನೆ ನೀಡಿರುವ ಆದೇಶದಂತೆ ಕೆರೆಗಳ ಸಂರಕ್ಷಣೆ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಕೆರೆಗಳ ಪ್ರದೇಶಗಳಲ್ಲಿ ಅನಧಿಕೃತ ಒತ್ತುವರಿ, ಕೆರೆ ಮಾಲಿನ್ಯ, ಕೆರೆ ಸಂರಕ್ಷಣೆ ಮತ್ತು ಇನ್ನಿತರೆ ಕೆರೆ ಸಂರಕ್ಷಣೆ ಕುರಿತಾಗಿ ಜಿಲ್ಲಾ ಮಟ್ಟದಲ್ಲಿ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಲು ದೂರು ನಿರ್ವಹಣಾ ಕೇಂದ್ರವನ್ನು ಸ್ಥಾಪಿಸಲಾಗಿದೆ.
ಪ್ರಯುಕ್ತ ಜಿಲ್ಲೆಯಲ್ಲಿರುವ ಎಲ್ಲಾ ಕೆರೆಗಳ ಪ್ರದೇಶಗಳಲ್ಲಿ ಅನಧಿಕೃತ ಒತ್ತುವರಿ, ಕೆರೆ ಮಾಲಿನ್ಯ, ಕೆರೆ ಸಂರಕ್ಷಣೆ ಮತ್ತು ಇನ್ನಿತರೆ ಕೆರೆ ಸಂರಕ್ಷಣೆಗೆ ಸಂಬಂಧಿಸಿದಂತೆ ದೂರುಗಳು ಏನಾದರೂ ಇದ್ದಲ್ಲಿ ಸಾರ್ವಜನಿಕರು ಜಿಲ್ಲಾ ಕಾರ್ಯನಿರ್ವಾಹಣಾಧಿಕಾರಿ, ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ದಿ ಪ್ರಾಧಿಕಾರ, ದಾವಣಗೆರೆ ಇಲ್ಲಿ ಸ್ಥಾಪಿಸಿರುವ ಕೆರೆ ಸಂರಕ್ಷಣೆ ಮತ್ತು ನಿರ್ವಹಣೆಯ ದೂರು ನಿರ್ವಹಣಾ ಕೇಂದ್ರದ ದೂ.ಸಂ: 08192-226302 ಗೆ ಮತ್ತು ನದಿ ಮಾಲಿನ್ಯ ನಿಯಂತ್ರಣ ಮತ್ತು ಸಂರಕ್ಷಣೆಗೆ ಸಂಬಂಧಿಸಿದಂತೆ ಪರಿಸರ ಅಧಿಕಾರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ದಾವಣಗೆರೆ ಇವರ ದೂ.ಸಂ: 08192-252895 ಕ್ಕೆ ಕಚೇರಿ ಸಮಯದಲ್ಲಿ ಕರೆ ಮಾಡಿ ದೂರುಗಳನ್ನು ನೀಡಬಹುದೆಂದು ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ತಿಳಿಸಿದ್ದಾರೆ.