ಅನಧಿಕೃತ ಗುಡಿಸಲು ತೆರವಿಗೆ ಆಗ್ರಹಿಸಿ ಪ್ರತಿಭಟನೆ

ದಾವಣಗೆರೆ, ಏ.19- ಬಾಬಾ ಸಾಹೇಬ್ ಅಂಬೇಡ್ಕರ್ ಭವನ, ಅಂಗ ನವಾಡಿ ಕೇಂದ್ರಕ್ಕೆ ಮೀಸಲಿಟ್ಟ ತುರ್ಚ ಘಟ್ಟ ಗ್ರಾಮದ ಕಲ್ಲೇಶ್ವರ ಬಡಾವಣೆಯ ತಿಪ್ಪೇಬೀಳು ಜಾಗದಲ್ಲಿ ಅನಧಿಕೃತ ಗುಡಿಸಲು ಹಾಕಿಕೊಂಡವರನ್ನು ತೆರವುಗೊಳಿಸಲು ಒತ್ತಾಯಿಸಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘ (ಎಸ್‍ಸಿ) ದಿಂದ ನಗರದಲ್ಲಿಂದು ಪ್ರತಿಭಟನೆ ನಡೆಸಲಾಯಿತು.

ನಗರದ ತಾಲ್ಲೂಕು ಕಚೇರಿ ಎದುರು ಸಂಘದ ಅಧ್ಯಕ್ಷ ಬಿ. ಪ್ರಸನ್ನ, ಕಾರ್ಯದರ್ಶಿ ಆರ್. ಮಂಜಪ್ಪ ನೇತೃತ್ವದಲ್ಲಿ ಪ್ರತಿಭಟಿಸಿದ ಗ್ರಾಮಸ್ಥರು, ಸದಸ್ಯರು, ತುರ್ಚಘಟ್ಟ ಗ್ರಾಮದಲ್ಲಿ ಅಂಬೇಡ್ಕರ್ ಭವನ, ಅಂಗನವಾಡಿ ಕೇಂದ್ರಕ್ಕೆ ಹಿಂದೆ ಗ್ರಾಮ ಸಭೆ ಮತ್ತು ಊರಿನ ಗ್ರಾಮಸ್ಥರ ಸಮ್ಮುಖದಲ್ಲಿ ಮೀಸಲಿಟ್ಟಿದ್ದು, ಆ ಜಾಗವನ್ನು ಉದ್ದೇ ಶಿತ ಕಾರ್ಯಕ್ಕಷ್ಟೇ ಮೀಸಲಿಡುವಂತೆ ತಹಸೀಲ್ದಾರ್‍ಗೆ ಮನವಿ ಸಲ್ಲಿಸಿದರು. 

ತುರ್ಚಘಟ್ಟ ಗ್ರಾಮದ ಅನೇಕ ಕುಟುಂಬಗಳು ಸರ್ಕಾರದಿಂದ ಜಮೀನು, ಜನತಾ ಮನೆ, ವಿವಿಧ ಯೋಜನೆಯಡಿ ವಸತಿ, ನಿವೇಶನಗಳನ್ನು ಪಡೆದಿವೆ. 

ಮತ್ತೆ ಕೆಲವರು ಆರ್ಥಿಕವಾಗಿ ಸಬಲರಿದ್ದು, ಜೀವನಾಧಾರಕ್ಕೆ 1 ಎಕರೆಗಿಂತಲೂ ಹೆಚ್ಚು ಜಮೀನು ಹೊಂದಿದ್ದಾರೆ. ಮತ್ತೆ ಕೆಲವರು ನಿವೇಶನಗಳನ್ನೂ ಹೊಂದಿದ್ದಾರೆ. ವಾಸ್ತವ ಹೀಗಿದ್ದರೂ ಗ್ರಾಮದ ತಿಪ್ಪೇಬೀಳು ಜಾಗದಲ್ಲಿ ಗುಡಿಸಲು ಹಾಕಿಕೊಂಡು, ಏನೂ ಇಲ್ಲದವರಂತೆ ವರ್ತಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ತುರ್ಚಘಟ್ಟ ಗ್ರಾಮದ ಕೆಲವರು ಅನಧಿಕೃತವಾಗಿ ಗುಡಿಸಲು ಹಾಕಿ ಕೊಂಡಿದ್ದಾರೆ. ಅಲ್ಲಿರುವ ಕುಟುಂಬಗಳು ಆರ್ಥಿಕವಾಗಿ ಉತ್ತಮವಾಗಿದ್ದು, ಅವರಿಗೆ ಹಿಂದೆಯೂ ಜಮೀನು ಮತ್ತು ಸರ್ಕಾರಿ ಜನತಾ ಮನೆಗಳನ್ನು ನೀಡ ಲಾಗಿತ್ತು. ಅಂತಹವರ ದಾಖಲೆಗಳನ್ನೂ ಮನವಿ ಪತ್ರದಲ್ಲಿ ದಾಖಲಿಸಿದ್ದು, ಆ ಜಾಗವನ್ನು ಉದ್ದೇಶಿತ ಕಾರ್ಯಕ್ಕಾಗಿ ಬಿಡಿಸಿಕೊಡಬೇಕು. ಅನಧಿಕೃತವಾಗಿ ಗುಡಿಸಲು ಹಾಕಿಕೊಂಡ ಯಾರೂ ಸಹ ನಿರಾಶ್ರಿತರಲ್ಲ. ಎಲ್ಲರೂ ಆಶ್ರಿತರೇ ಆಗಿದ್ದು, ಜೀವನಕ್ಕೆ ಯಾವುದೇ ಸಮಸ್ಯೆ ಇಲ್ಲದವರು. ಹೊಲ, ಗದ್ದೆ ಇದೆ, ನಿವೇಶನ, ಮನೆಗಳೂ ಇವೆ. ಹೀಗಿ ದ್ದರೂ ಬಾಬಾ ಸಾಹೇಬ್ ಅಂಬೇಡ್ಕರ್ ಭವನಕ್ಕೆಂದು, ಅಂಗನವಾಡಿ ಕೇಂದ್ರ ನಿರ್ಮಿಸಲೆಂದು ಕಾಯ್ದಿಟ್ಟ ಜಾಗದಲ್ಲಿ ಗುಡಿಸಲುಗಳನ್ನು ಅನಧಿಕೃತವಾಗಿ ಹಾಕಿಕೊಂಡಿದ್ದಾರೆ. ತಕ್ಷಣವೇ ತಹಶೀ ಲ್ದಾರರು ಈ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ, ಜಾಗವನ್ನು ಉದ್ದೇಶಿತ ಕಾರ್ಯಕ್ಕೆ ಮಂಜೂರು ಮಾಡಿಕೊಡ ಬೇಕು ಎಂದು ಆಗ್ರಹಿಸಿದರು.

error: Content is protected !!