ಹರಿಹರ, ಜು.9- ಶಾಸಕ ಎಸ್.ರಾಮಪ್ಪ ಮುಖ್ಯಮಂತ್ರಿ ಬಿ.ಎಸ್. ಯಡಿ ಯೂರಪ್ಪ ಅವರನ್ನು ಬೆಂಗಳೂರಿನ ಅವರ ನಿವಾ ಸದಲ್ಲಿ ಇಂದು ಭೇಟಿ ಮಾಡಿ, ಹರಿಹರಕ್ಕೆ ವ್ಯೆದ್ಯಕೀಯ ಕಾಲೇಜು ಮಂಜೂರು ಮಾಡುವಂತೆ ಹಾಗೂ ಭೈರನಪಾದ ಏತ ನೀರಾವರಿ ಯೋಜನೆಗೆ ಹಣ ಬಿಡುಗಡೆ ಗೊಳಿಸುವಂತೆ ಕೋರಿ ಪತ್ರವನ್ನು ನೀಡಿದರು.
ಈ ವೇಳೆ `ಜನತಾವಾಣಿ’ಯೊಂ ದಿಗೆ ದೂರವಾಣಿಯಲ್ಲಿ ಮಾತನಾಡಿದ ಶಾಸಕರು, ಹರಿಹರ ನಗರವು ರಾಜ್ಯದ ಹೃದಯ ಭಾಗದಲ್ಲಿದೆ. ನಾಲ್ಕೂ ಕಡೆಯಿಂದ ಸಂಚಾರ ಮಾಡುವುದಕ್ಕೆ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ತುಂಗಭದ್ರಾ ನದಿ ಪಕ್ಕದಲ್ಲಿ ಹರಿಯು ವುದರಿಂದ ಕುಡಿಯುವ ನೀರು, ಸಾರ್ವಜನಿಕ ಆಸ್ಪತ್ರೆಯ ಹಿಂಬದಿಯಲ್ಲಿ 22 ಎಕರೆ ವಿಶಾಲವಾದ ಜಮೀನನು ಇರುವುದರಿಂದ ಹರಿಹರಕ್ಕೆ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುವಂತೆ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿರುವುದಾಗಿ ತಿಳಿಸಿದರು. ಭೈರನಪಾದ ಯೋಜನೆಗೆ ಹಣ ಬಿಡುಗಡೆ ಮಾಡಿ ಸಾರಥಿ, ಚಿಕ್ಕಬಿದರಿ, ನಂದಿಗುಡಿ ರಸ್ತೆ, ಯಕ್ಕೆಗೊಂದಿ ಭಾನುವಳ್ಳಿ ರಸ್ತೆ ಸೇರಿದಂತೆ ಹಲವಾರು ಕಾಮಗಾರಿಗಳಿಗೂ ಆದಷ್ಟು ಬೇಗ ಹಣ ಬಿಡುಗಡೆ ಮಾಡುವಂತೆ ಕೋರಿದ್ದಾಗಿ ಹೇಳಿದರು.