ಹರಪನಹಳ್ಳಿ ಪುರಸಭೆ ಸದಸ್ಯ ಎಂ.ವಿ.ಅಂಜಿನಪ್ಪ ಆಕ್ರೋಶ
ಹರಪನಹಳ್ಳಿ, ಜು.9- ಕಾಂಗ್ರೆಸ್ ಪಾರ್ಟಿ ಯಾರೊಬ್ಬರ ಸ್ವತ್ತಲ್ಲ, ಮಾಜಿ ಶಾಸಕ ದಿ. ಎಂ.ಪಿ.ರವೀಂದ್ರ ಅವರು ಇಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿ ದ್ದಾರೆ. ಅವರ ಭಾವಚಿತ್ರವನ್ನು ಬ್ಯಾನರ್ನಲ್ಲಿ ಮುದ್ರಿ ಸದಿರುವುದು ನಮಗೆ ನೋವಾಗಿದೆ ಎಂದು ಪುರಸಭಾ ಸದಸ್ಯ ಎಂ.ವಿ.ಅಂಜಿನಪ್ಪ ಹೇಳಿದರು.
ಪಟ್ಟಣದ ಬಾಣಗೇರಿ ಬಳಿ ಆರಂಭಗೊಂಡ ನೂತನ ಕಾಂಗ್ರೆಸ್ ಕಚೇರಿಯ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಪಂಜರದ ಗಿಳಿಯಂತಾಗಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಇಂದು ಸ್ವತಂತ್ರ ಸಿಕ್ಕಿದೆ. ಕಾಂಗ್ರೆಸ್ನಲ್ಲಿ ಪಕ್ಷ ನಿಷ್ಠೆಗಿಂತ ವ್ಯಕ್ತಿ ನಿಷ್ಠೆ ಇದೆ. ಪಟ್ಟಣದಲ್ಲಿ ಸ್ವಂತಕ್ಕೆ ಕಾಂಗ್ರೆಸ್ ಕಚೇರಿ ಆರಂಭಗೊಂಡಿರುವುದು ಸಂತಸದ ಸಂಗತಿ, ನಾವು ಸ್ವಾಗತಿಸುತ್ತೇವೆ. ಇನ್ನು ಮುಂದೆಯಾದರೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಗುಂಪುಗಾರಿಕೆ ಬಿಟ್ಟು ಬ್ಲಾಕ್ ಅಧ್ಯಕ್ಷರು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಇಲ್ಲಿಯ ಎಲ್ಲಾ ಬೆಳವಣಿಗೆಗಳನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ಯು.ಟಿ.ಖಾದರ್, ಕಾರ್ಯಾಧ್ಯಕ್ಷರ ಗಮನಕ್ಕೆ ತಂದಿದ್ದೇವೆ. ಡಿ.ಕೆ.ಶಿವಕುಮಾರ್ ಅವರು ತಮ್ಮ ಭೇಟಿಗೆ ಸಮಯ ನಿಗದಿಗೊಳಿಸಿ ಚರ್ಚೆಗೆ ಅವಕಾಶ ಕೊಟ್ಟಿದ್ದರೆ, ನಾವು ಕಾಂಗ್ರೆಸ್ ಪಕ್ಷವನ್ನು ಗಟ್ಟಿಗೊಳಿಸುತ್ತೇವೆ. ಕಾಂಗ್ರೆಸ್ ಪಕ್ಷ ಯಾರ ಮುಷ್ಟಿಯಲ್ಲಿಯೂ ಇರಬಾರದು ಎಂದ ಅವರು, ಮುಂಬರುವ ಜಿ.ಪಂ ಹಾಗೂ ತಾ.ಪಂ ಚುನಾವಣಾ ಟಿಕೆಟ್ಗಳನ್ನು ಪಕ್ಷದ ನಿಷ್ಠಾವಂತರಿಗೇ ಸಾಮಾಜಿಕ ನ್ಯಾಯದಡಿ ನೀಡಬೇಕು. ಈ ಎಲ್ಲಾ ವಿಚಾರಗಳನ್ನು ಹೈಕಮಾಂಡ್ ಗಮನಕ್ಕೆ ತರುತ್ತೇವೆ ಎಂದರು.
ಕೆಪಿಸಿಸಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಮಾತನಾಡಿದರು.
ಎಪಿಎಂಸಿ ಅಧ್ಯಕ್ಷ ಅಶೋಕಗೌಡ, ಪುರಸಭಾ ಸದಸ್ಯರುಗಳಾದ ಟಿ.ವೆಂಕಟೇಶ್, ಗೊಂಗಡಿ ನಾಗರಾಜ್, ಉದ್ದಾರ ಗಣೇಶ್, ಲಾಟಿ ದಾದಾ ಪೀರ್, ತಾ.ಪಂ ಸದಸ್ಯರುಗಳಾದ ಹುಲಿಕಟ್ಟಿ ಚಂದ್ರಪ್ಪ, ಮೈದೂರು ರಾಮಣ್ಣ, ಮುಖಂಡರಾದ ಚಿಕ್ಕೇರಿ ಬಸಪ್ಪ, ಎಚ್. ವಸಂತಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತೂರು ಬಸವರಾಜ್, ವಿ.ಎಸ್.ಎಸ್.ಎನ್ ಅಧ್ಯಕ್ಷ ಟಿ.ಎಚ್.ಎಂ ಮಂಜು ನಾಥ್, ತಾ.ಪಂ ಮಾಜಿ ಸದಸ್ಯರಾದ ಕಂಚಿಕೇರಿ ಜಯಲಕ್ಷ್ಮಿ, ಸುಷ್ಮಾ ಪ್ರಕಾಶ್ ಪಟೇಲ್, ಉದಯ ಶಂಕರ್ ಮಾಗಾನಹಳ್ಳಿ, ಕನಕನಬಸಾಪುರ ಮಂಜು ನಾಥ್, ತೆಲಿಗಿ ಉಮಾಕಾಂತ್, ರಾಯದುರ್ಗದ ವಾಗೀಶ್ ಮತ್ತಿತರರು ಹಾಜರಿದ್ದರು.