ಪ್ರೇರಣೆಯಿಂದ ಏನನ್ನಾದರೂ ಸಾಧಿಸಬಹುದು

ದಾವಣಗೆರೆ, ಫೆ.16- ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಾಣಿಜ್ಯ ಶಾಸ್ತ್ರ ಸ್ನಾತಕೋತ್ತರ ವಿಭಾಗದ ಹೊಸ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಹಳೆಯ ವಿದ್ಯಾರ್ಥಿಗಳನ್ನು ಬೀಳ್ಕೊಡಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜು ಪ್ರಾಂಶುಪಾಲ ತೂ.ಕ. ಶಂಕರಯ್ಯ ಮಾತನಾಡಿ, ಪ್ರೇರಣೆಯಿಂದ ಏನನ್ನಾದರೂ ಸಾಧಿಸಬಹುದು ಎಂದು ಅಭಿಪ್ರಾಯಪಟ್ಟರು. ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಶಂಕರ್ ಆರ್. ಶೀಲಿ, ಕನ್ನಡ ವಿಭಾಗದ ಪ್ರಾಧ್ಯಾಪಕ ಗಿರಿಸ್ವಾಮಿ ಹಿತನುಡಿಗಳನ್ನಾಡಿದರು.  ಇದೇ ವೇಳೆ 2020 ಕರ್ನಾಟಕ ರಾಜ್ಯ ಉಪನ್ಯಾಸಕ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಕಾಲೇಜಿನ 13 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 

ಕಾರ್ಯಕ್ರಮದಲ್ಲಿ ಪ್ರೊ. ಮಂಜಣ್ಣ, ಪ್ರೊ. ಪ್ರಕಾಶ್, ಪ್ರೊ. ಲಕ್ಷ್ಮಣ್, ಪ್ರೊ. ಯಶೋಧ, ಪ್ರೊ. ಶ್ಯಾಮಲಾ, ಚೈತ್ರಾ, ಚನ್ನಬಸಪ್ಪ, ಕನ್ನಕಟ್ಟಿ ಜಯಣ್ಣ, ಶಂಭುಲಿಂಗಪ್ಪ, ಆರ್.ಸಿ. ನಾಗರಾಜ್, ರವಿ ಸಿಂಗ್ ಇನ್ನಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಾವ್ಯ ಪ್ರಾರ್ಥಿಸಿದರು. ನಿಶಾರಾಣಿ ಸ್ವಾಗತಿಸಿದರು. ಅನುಷಾ ವಂದಿಸಿದರು. ದಾಕ್ಷಾಯಣಿ ಸನ್ಮಾನ ಕಾರ್ಯಕ್ರಮ ನೆರವೇರಿಸಿಕೊಟ್ಟರು. ಬಸವರಾಜ್ ಮತ್ತು ಯಶಸ್ವಿನಿ ನಿರೂಪಿಸಿದರು.

error: Content is protected !!