ಬಾಗಳಿ ಗ್ರಾಮಸ್ಥರಿಂದ ಪಂಚಾಯ್ತಿ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

ಹರಪನಹಳ್ಳಿ, ಜು.8- ತಾಲ್ಲೂಕಿನ ಜಿಲ್ಲಾ ಪಂಚಾಯ್ತಿ ಹಾಗೂ ತಾಲ್ಲೂಕು ಪಂಚಾಯ್ತಿ ಕ್ಷೇತ್ರಗಳ ಪುನರ್ ವಿಂಗಡಣೆ ಯಾಗಿದ್ದು, ಬಾಗಳಿ ತಾ.ಪಂ. ಕ್ಷೇತ್ರ ಕೈಬಿಟ್ಟಿರುವುದಕ್ಕೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕಿನ ಬಾಗಳಿ ಗ್ರಾಮವು ತನ್ನದೇ ಆದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದ್ದು ,ಪುರಾತನ ಕಾಲದ ಶ್ರೀ ಕಲ್ಲೇಶ್ವರ ದೇವಸ್ಥಾನ ಹಾಗೂ ಮ್ಯೂಸಿಯಂ ಒಳಗೊಂಡು ಅನೇಕ ದೇಗುಲಗಳು, ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿರುವ ಗ್ರಾಮವಾಗಿದೆ. ಪಂಚಗಣಾಧೀಶರ ನೆಲೆಬೀಡಾಗಿದ್ದು, ಹಿಂದೆ ಅನೇಕ ಗ್ರಾಮಗಳನ್ನು ಒಳಗೊಂಡಿರುವ ಮಂಡಲ ಪಂಚಾಯ್ತಿ ಸಹ ಹೊಂದಿತ್ತು. 

ಬಾಗಳಿಯನ್ನು ಜಿಲ್ಲಾ ಪಂಚಾಯ್ತಿ ಕ್ಷೇತ್ರವನ್ನಾಗಿ ಸಲು ಹಾಗೂ ತಾಲ್ಲೂಕು ಪಂಚಾಯ್ತಿ ಕ್ಷೇತ್ರವನ್ನು ಮುಂದುವರೆಸುವಂತೆ ಈ ಹಿಂದೆ ರಾಜ್ಯ ಚುನಾವಣಾ ಧಿಕಾರಿಗಳಿಗೆ, ಉಪವಿಭಾಗಾಧಿಕಾರಿಗಳಿಗೆ, ಸಚಿವರು ಗಳಿಗೆ, ಶಾಸಕರಿಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಬಾಗಳಿ ಗ್ರಾಮವು ಹಿಂದೆ ತಾಲ್ಲೂಕು ಪಂಚಾಯಿತಿ ಕ್ಷೇತ್ರ ವಾಗಿದ್ದು, ಈಗ ಇದನ್ನು ಕೈಬಿಟ್ಟಿರುವು ದರಿಂದ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೂಡಲೇ ಬಾಗಳಿ ತಾಲ್ಲೂಕು ಪಂಚಾಯ್ತಿ  ಕ್ಷೇತ್ರವನ್ನು ಮುಂದುವರೆ ಸಬೇಕು. ಹಾಗೂ ಈ ಗ್ರಾಮ ಒಳಗೊಂಡು ಜಿ.ಪಂ. ಕ್ಷೇತ್ರವನ್ನಾಗಿ ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ಮುಂಬರುವ ಎಲ್ಲಾ ರೀತಿಯ ಚುನಾವಣೆಗಳನ್ನು ಬಹಿ ಷ್ಕರಿಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಗ್ರಾಮಸ್ಥರಾದ ಆರ್. ಶಿವಕುಮಾರ ಗೌಡ, ಬಿ.ಬಿ. ಹೊಸೂರಪ್ಪ, ಎನ್. ಮಂಜುನಾಥ್‌, ಬಣಕಾರ ಜಗದೀಶ, ಬಡಮರ ಭೀಮಪ್ಪ, ಎನ್.ಜಿ. ಸಿದ್ದಪ್ಪ, ಬಿ. ಗೋಣೆಪ್ಪ, ಆರ್. ನಿರಂಜನ್, ಎಂ. ಪರಮೇಶಪ್ಪ, ಹೊಳಲು ಮಂಜುನಾಥ, ಹನುಮಂತಪ್ಪ, ಕೊಟ್ರೇಶಪ್ಪ ಮತ್ತಿತರರು ತಿಳಿಸಿದ್ದಾರೆ.

error: Content is protected !!