ದಾವಣಗೆರೆ, ಏ. 18 – ಚಿಗಟೇರಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ `ನಗು ಮಗು’ ಆಂಬ್ಯುಲೆನ್ಸ್ ವಾಹನ ದುರಸ್ತಿಗೆ ಬಂದು 6 ತಿಂಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀ ಕಾಂತ ದೂರಿದ್ದಾರೆ. ದುರಸ್ತಿಗೆ ವೆಚ್ಚ ಪಾವತಿ ಮಾಡಲು ಜಿಲ್ಲಾಸ್ಪತ್ರೆಯ ಅಧೀಕ್ಷಕರು ಯಾವುದೇ ಕ್ರಮ ವಹಿಸಿರುವುದಿಲ್ಲ.
ನವಜಾತ ಶಿಶುಗಳ ತುರ್ತ ಚಿಕಿತ್ಸೆಗೆ ಆಂಬ್ಯುಲೆನ್ಸ್ ಅವಶ್ಯಕತೆ ಇದ್ದು ಕೂಡಲೇ ವಾಹನ ದುರಸ್ತಿ ಮಾಡಿಸಿ ಸಾರ್ವಜನಿಕ ಸೇವೆಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.