33 ಕೋಟಿ ದೇವತೆಗಳನ್ನು ಹೊಂದಿ, ಐಕ್ಯತೆ ಒಳಗೊಂಡ ಅಪರೂಪದ ರಾಷ್ಟ್ರ ಭಾರತ

ಹರಪನಹಳ್ಳಿಯಲ್ಲಿ ಉಜ್ಜಯಿನಿ ಶ್ರೀ

ಹರಪನಹಳ್ಳಿ, ಫೆ.15- ಭಾರತ 33ಕೋಟಿ ದೇವತೆಗಳನ್ನು ಹೊಂದಿ ರುವ ಐಕ್ಯತೆಯನ್ನು ಒಳಗೊಂಡ ಅಪರೂಪದ ರಾಷ್ಟ್ರವಾಗಿದೆ ಎಂದು ಉಜ್ಜಯಿನಿ ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ನಟರಾಜ ಬಡಾವಣೆ ಯಲ್ಲಿ ನೂತನವಾಗಿ ನಿರ್ಮಾಣಗೊಂಡಿ ರುವ ಶ್ರೀ ವರಸಿದ್ಧಿ ವಿನಾಯಕ ಮೂರ್ತಿ ಪ್ರತಿಷ್ಠಾಪನೆ ಹಾಗೂ ಅಷ್ಟಬಂಧ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಯಾರಲ್ಲಿ ಸಂಪತ್ತು, ಅಧಿಕಾರವಿದೆಯೋ ಅವರ ಸುತ್ತ ಜನ ತಿರುಗುತ್ತಾರೆ. ಶ್ರೇಷ್ಠವಾದ ಗುಣಮಟ್ಟ ಅಂದರೆ ವಿನಯವಂತ, ವಿದ್ಯಾವಂತ, ಯೋಗ್ಯವಾದ ಲಕ್ಷಣ ಹೊಂದಿದ ವ್ಯಕ್ತಿಯನ್ನು ಸಮಾಜ, ಧರ್ಮ, ದೈವ, ವೇದಿಕೆಗಳಿಂದ ಗೌರವಿಸುತ್ತದೆ. ಯಾವುದೇ ಪರಿಮಿತಿ, ಚೌಕಟ್ಟು ಇಲ್ಲದೆ ಎಲ್ಲಾ ವರ್ಗದವರು ಸರ್ವ ಜನಾಂಗದವರು ಪೂಜಿಸುವಂತಹ ಎರಡು ದೇವರಿವೆ ಅವು ಗಣಪತಿ ಮತ್ತು ಆಂಜನೇಯ ಸ್ವಾಮಿ ಎಂದು ಹೇಳಿದರು.

ಲಂಚ ಕೊಡುವುದು, ಪಡೆಯುವುದು ತಪ್ಪು ಎನ್ನುವ ಭಾವನೆ ಇದೆ. ಎಲ್ಲಿಯವರೆಗೆ ಲಂಚ ಕೊಡುವವರು ಇರುತ್ತಾರೋ ಅಲ್ಲಿಯವರೆಗೂ ತೆಗೆದುಕೊಳ್ಳುವವರೂ ಇರುತ್ತಾರೆ. ಯಾವಾಗ ಮತಗಳನ್ನು ಮಾರಿಕೊಳ್ಳುವುದು ತಪ್ಪುತ್ತದೋ ಅಲ್ಲಿಯವರೆಗೂ ಉತ್ತಮ ಗುಣವುಳ್ಳವರು ಸಿಗುವುದಿಲ್ಲ ಎಂದು ಹೇಳಿದರು.

ಉತ್ತಮ ಚಾರಿತ್ರ್ಯಕ್ಕೆ ಆದ್ಯತೆ ಇರುತ್ತದೆ. ಸ್ಥಾನಮಾನ ಹುಡುಕಿಕೊಂಡು ಬರುತ್ತದೆ ಇದಕ್ಕೆ ಗಣಪತಿ, ಆಂಜನೇಯ ದೇವರು ಸಾಕ್ಷಿಯಾಗಿದ್ದಾರೆ ಎಂದರು.

ತೆಗ್ಗಿನಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕೇವಲ ಒಂದು ಕ್ಷೇತ್ರವಲ್ಲದೆ ಗ್ರಾಮೀಣ ಪ್ರದೇಶ ಒಳಗೊಂಡು ದೇಶದಲ್ಲಿ ಶೈಕ್ಷಣಿಕ, ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಕುಸಿದಿವೆ.

1 ವರ್ಷ ಕಾಲ ದೇಶದಲ್ಲಿ ಶೇ.1ರಷ್ಟು ಕೊರೊನಾ ಸೋಂಕಿಗೆ ಒಳಗಾಗಿದ್ದೇವೆ ಎಂದರೆ ಅದು ಧರ್ಮ, ದೇವರ, ಗುರುವಿನ ಮೇಲೆ ಇಟ್ಟಿರುವ ನಂಬಿಕೆಯಾಗಿದೆ. ಮಾರ್ಚ್  23ರಲ್ಲಿ ಕೊರೊನಾ ಸೋಂಕು ಆವರಿಸಿತ್ತು. 

ಇಂತಹ ಸಂಕಷ್ಟದ ಸಂದರ್ಭದಲ್ಲಿ ನಟರಾಜ ಬಡಾವಣೆಯ ಜನರು ತೆಗೆದುಕೊಂಡ ತಿರ್ಮಾನದಂತೆ ಇಂದು ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನ ಇಂದು ನಿರ್ಮಾಣವಾಗಿ ನಿರ್ವಿಗ್ನವಾಗಿ ನಡೆದಿರುವುದು ಪವಾಡವೇ ಸರಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಮಂಜುನಾಥ ಇಜಂತಕರ್, ಶ್ರೀ ವರಸಿದ್ಧಿ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ಯು.ಪಿ.ನಾಗರಾಜ, ತೆಗ್ಗಿನಮಠ ಸಂಸ್ಥೆ ಕಾರ್ಯದರ್ಶಿ ಟಿ.ಎಂ.ಚಂದ್ರಶೇಖರಯ್ಯ, ಪೂಜಾರ ಚಂದ್ರಶೇಖರ್, ವೇದ ಮೂರ್ತಿಗಳಾದ ಯು. ಶಂಕರ ನಾರಾಯಣಭಟ್ ಉಪ್ಪುಂದ, ಎಂ.ಕೃಷ್ಣಭಟ್, ಕೆ.ಶಿವಾನಂದಪ್ಪ, ರಾಜು ಇಜಂತಕರ್, ಹಂಸರಾಜ್ ಡಿ ಪಾಟೀಲ್, ಟಿ.ನೂರುದ್ಧೀನ್, ಹೆಚ್.ಚನ್ನನಗೌಡ ದೊಡ್ಡಮನಿ, ಕೆ.ಬಸವರಾಜ, ಶ್ರೀನಿವಾಸ ಪಟಗೆ, ಹೆಚ್.ವಾಗೀಶ್, ಜಿ.ಎನ್.ಬಸವರಾಜ, ಎಂ.ಸುನೀತಾ ಈರಣ್ಣ, ಆರ್.ಜ್ವಾಲಾ ಪದ್ಮರಾಜ್ ಜೈನ್, ಹೆಚ್.ಶಾರದ ಸಕ್ರಪ್ಪ, ಪ್ರಸನ್ನಕುಮಾರ ಜೈನ್, ಇಸಿಓ ಮಂಜುನಾಥ ಗಿರಜ್ಜಿ, ಬಿಆರ್‍ಸಿ ಅಣ್ಣಪ್ಪ, ಸಿದ್ದಪ್ಪ, ಇತರರು ಇದ್ದರು.

error: Content is protected !!