ಕದಳಿ ಕಮ್ಮಟದಲ್ಲಿ ದತ್ತಿ ಉಪನ್ಯಾಸ

ಕದಳಿ ಕಮ್ಮಟದಲ್ಲಿ ದತ್ತಿ ಉಪನ್ಯಾಸ - Janathavaniದಾವಣಗೆರೆ, ಫೆ.12 – ಕದಳಿ ಮಹಿಳಾ ವೇದಿಕೆಯ ಜಿಲ್ಲಾ ಘಟಕದಿಂದ 121ನೇ ಕಮ್ಮಟವನ್ನು ವಾಟ್ಸಾಪ್ ನಲ್ಲಿ ಆಯೋಜಿಸಲಾಗಿತ್ತು. ಎಲೆಬೇತೂರು ತೋಟದ ರೇವಪ್ಪ ಮತ್ತು ಮುರಿಗೆಮ್ಮ ದತ್ತಿ ಹಾಗು ಲಿಂ|| ಕೆ ಜಿ ಕಲ್ಲಪ್ಪ ಮತ್ತು ಲಿಂ|| ಕೆ ಜಿ ಲೋಕೇಶ್ವರಮ್ಮ ದತ್ತಿ ಏರ್ಪಡಿಸಲಾಗಿತ್ತು. ದತ್ತಿ ಅಂಗವಾಗಿ ಬಾಪೂಜಿ ಪ್ರೌಢಶಾಲೆಯ ಸಹ ಶಿಕ್ಷಕ ಶಿವಕುಮಾರ್ ಆರ್. `ಶರಣರ ಸಾಮಾಜಿಕ ದೃಷ್ಟಿಕೋನ’ ವಿಷಯದ ಮೇಲೆ ಉಪನ್ಯಾಸ ನೀಡಿದರು. 

ಶರಣರು ವ್ಯಕ್ತಿಯ ಯೋಗ್ಯತೆಯನ್ನು ನೀತಿಯ ಮಾನದಂಡದಿಂದ ಅಳೆದರು,  ಕಾಯಕ ತತ್ವಕ್ಕೆ ಮಹತ್ವ ನೀಡಿದ್ದರು. ಸಮಾಜದ ಅಸಮಾನತೆ ದಾರಿದ್ರ್ಯವನ್ನು ನಿವಾರಿಸುವ ಏಕೈಕ ಮಂತ್ರ ಕಾಯಕ ಎಂದು ಹನ್ನೆರಡನೇ ಶತಮಾನದಲ್ಲಿಯೇ ಶರಣರು ಪ್ರತಿಪಾದಿಸಿದ್ದರು ಎಂದು ನುಡಿದರು.

ರತ್ನ ರೆಡ್ಡಿ ಅವರು ದತ್ತಿ ಹಾಗು ದಾನಿಗಳ ಪರಿಚಯವನ್ನು ಮಾಡಿದರು, ಆಶಾ ಎಂ ಪಾಟೀಲ್ ಅವರು ಅಧ್ಯಕ್ಷತೆ ವಹಿಸಿದ್ದರು. ಶಿವ ವಚನ ಗಾಯನ ತಂಡದವರಿಂದ ಪ್ರಾರ್ಥನೆ ಸಲ್ಲಿಕೆ ನಂತರ, ಕಾರ್ಯದರ್ಶಿ ವಿಜಯ ಚಂದ್ರಶೇಖರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಗೌರವಾಧ್ಯಕ್ಷರಾದ ಶಂಶಾದ್ ಬೇಗಮ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!