ಹಳ್ಳಿಗಳಿಗೆ ಹಗಲು ತ್ರೀ-ಫೇಸ್‌ನಲ್ಲಿ ವಿದ್ಯುತ್ ಪೂರೈಕೆಗೆ ಒತ್ತಾಯ

ದಾವಣಗೆರೆ, ಫೆ.14- ಈ ಬಾರಿ ಉತ್ತಮ ಮಳೆಯಾಗಿ ವಿದ್ಯುತ್‌ ಉತ್ಪಾದನೆಯಲ್ಲಿ ಯಾವುದೇ ಕೊರತೆಯಿಲ್ಲ. ಆದರೂ ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ರೈತರ ಹಿತದೃಷ್ಟಿಯಿಂದ  ಹಗಲು ಹೊತ್ತು 3 ಫೇಸ್‌ನಲ್ಲಿ ಬೆಳಿಗ್ಗೆ 5 ರಿಂದ ಕನಿಷ್ಠ 8 ತಾಸು ವಿದ್ಯುತ್‌ ಸರಬರಾಜು ಮಾಡಲು ರೈತರ ಪರವಾಗಿ ಜಿ.ಹೆಚ್‌. ನಾಗರಾಜ್‌ ಒತ್ತಾಯಿಸಿದ್ದಾರೆ.

ಹೆಚ್‌.ಕಲಪನಹಳ್ಳಿ, ತೋಳಹುಣಸೆ ಸೇರಿ ಅನೇಕ ಹಳ್ಳಿಗಳಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ತೊಂದರೆ ಇದೆ. ರಾತ್ರಿ ವೇಳೆ ಪ್ರಾಣಿಗಳಿಂದ ಭಯಭೀತರಾಗಿ ಜಮೀನಿಗೆ ಹೋಗಿ ನೀರು ಕಟ್ಟಲು ರೈತರಿಗೆ ಸಾಧ್ಯವಾಗುತ್ತಿಲ್ಲ. ಪದೇ ಪದೇ ವಿದ್ಯುತ್‌ ಏರುಪೇರಾಗಿ ರೈತರ ವಿದ್ಯುತ್‌ ಸಲಕರಣೆಗಳು ಸಹ ಹಾಳಾಗುತ್ತಿವೆ. 

ಈ ಬಗ್ಗೆ ಮುಖ್ಯಮಂತ್ರಿಗಳು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

error: Content is protected !!