ಮಲೇಬೆನ್ನೂರು, ಏ.15- ಪಟ್ಟಣದ ಹೊರವಲಯದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮೇ 14 ರಂದು ಪ್ರತಿಷ್ಠಾಪನೆಗೊಳ್ಳಲಿರುವ ಶಿಲಾ ಮೂರ್ತಿಗಳಿಗೆ ಇಂದು ಮಲೇಬೆನ್ನೂರು ಹಾಗೂ ಕುಂಬಳೂರಿನಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು.
ಬೆಳಿಗ್ಗೆಯೇ ಮಲೇಬೆನ್ನೂರು ಪ್ರವೇಶಿಸಿದ ಶಿಲಾಮೂರ್ತಿಗಳ ಮೆರವಣಿಗೆಗೆ ಹೊನ್ನಾಳಿ ಹಿರೇಕಲ್ಮಠದ ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಸ್ವಾಮೀಜಿಗಳು ಪುಷ್ಪಾರ್ಚನೆ ಮಾಡಿ ಬರಮಾಡಿಕೊಂಡರು. ಮಾಜಿ ಶಾಸಕ ಬಿ.ಪಿ. ಹರೀಶ್, ಹೆಚ್.ಎಸ್. ಶಿವಶಂಕರ್, ಜಿ.ಪಂ. ಸದಸ್ಯ ಬಿ.ಎಂ. ವಾಗೀಶ್ ಸ್ವಾಮಿ, ಯುವ ಮುಖಂಡ ಹೆಚ್.ಎಸ್. ಅರವಿಂದ್, ದೇವಸ್ಥಾನ ಟ್ರಸ್ಟ್ ಸಮಿತಿ ಅಧ್ಯಕ್ಷ ಬಿ. ಪಂಚಪ್ಪ, ಟ್ರಸ್ಟಿ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ. ಚಿದಾನಂದಪ್ಪ, ಬಿ. ನಾಗೇಂದ್ರಪ್ಪ, ಎನ್.ಕೆ. ವೃಷಭೇಂದ್ರಪ್ಪ, ಬಿ. ಮಹಾರುದ್ರಪ್ಪ, ಬಿ.ವಿ. ರುದ್ರೇಶ್, ಬಿ. ನಾಗೇಶ್, ಎನ್.ಕೆ. ಬಸವರಾಜ್, ಬಿ. ಮಲ್ಲಿಕಾರ್ಜುನ್, ಬಿ. ಶಂಭುಲಿಂಗಪ್ಪ, ರೈಸ್ ಮಿಲ್ ಮಾಲೀಕ ಯಕ್ಕನಹಳ್ಳಿ ಬಸವರಾಜಪ್ಪ, ಪೂಜಾರ್ ಬಸಪ್ಪ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಬಂಡೇರ ತಿಮ್ಮಣ್ಣ ಸೇರಿದಂತೆ, ಅನೇಕ ಗಣ್ಯರು ಪಾಲ್ಗೊಂಡಿದ್ದರು.
ಮೆರವಣಿಗೆ ಪಟ್ಟಣದ ರಾಜ ಬೀದಿಗಳಲ್ಲಿ ಸಂಚರಿಸಿದ ಸಂದರ್ಭದಲ್ಲಿ ಮುಸ್ಲಿಂ ಬಾಂಧವರು ಶಿಲಾಮೂರ್ತಿಗಳಿಗೆ ಹೂಮಾಲೆ ಹಾಕಿ ಸಾಮರಸ್ಯ ಮೆರೆದರು. ಜನರು ಹಣ್ಣು-ಕಾಯಿ ಪೂಜೆ ಮಾಡಿಸಿ ಭಕ್ತಿ ಸಮರ್ಪಿಸಿದರು. ಆನೆ ಅಂಬಾರಿ ಸೇರಿದಂತೆ ವಿವಿಧ ಕಲಾಮೇಳಗಳು ಮೆರವಣಿಗೆಗೆ ಮೆರುಗು ತಂದವು.
ಮೆರವಣಿಗೆ ಪುರಸಭೆ ಮುಂಭಾಗ ಆಗಮಿಸಿದ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಶ್ರೀಮತಿ ಪಾನಿಪೂರಿ ರಂಗನಾಥ್, ಉಪಾಧ್ಯಕ್ಷೆ ಅಂಜಿನಮ್ಮ ವಿಜಯಕುಮಾರ್, ಮುಖ್ಯಾಧಿಕಾರಿ ದಿನಕರ್, ಸದಸ್ಯರಾದ ಬಿ.ಎಂ. ಚನ್ನೇಶ್ ಸ್ವಾಮಿ, ಬಿ. ಸುರೇಶ್, ಎ. ಆರೀಫ್ ಅಲಿ, ಮಹಾಂತೇಶ್ ಸ್ವಾಮಿ, ಸುಬ್ಬಿ ರಾಜಪ್ಪ, ಯೂಸುಫ್, ದಾದಾವಲಿ, ಮಹಾಲಿಂಗಪ್ಪ, ಶೇಖರಪ್ಪ, ಸಾಕಮ್ಮ, ಯಶೋಧ, ಪ್ರೇಮ, ಬಿ.ಹೆಚ್. ಮಂಜಪ್ಪ, ಪಿ.ಆರ್. ರಾಜು, ಟಿ. ವಾಸಪ್ಪ, ಎ.ಕೆ. ಲೋಕೇಶ್ ಸೇರಿದಂತೆ, ಪುರಸಭೆ ಅಧಿಕಾರಿಗಳು ಶಿಲಾಮೂರ್ತಿಗಳಿಗೆ ಮಾಲಾರ್ಪಣೆ ಮಾಡಿದರು. ಮೆರವಣಿಗೆಯಲ್ಲಿ ಎಪಿಎಂಸಿ ಸದಸ್ಯ ಜಿ. ಮಂಜುನಾಥ್ ಪಟೇಲ್, ಬಿ. ವೀರಯ್ಯ, ತಳಸದ ಬಸವರಾಜ್, ನಿಟ್ಟೂರಿನ ಸಂಜೀವಮೂರ್ತಿ, ಗಂಗಾಧರ್, ಉಪನ್ಯಾಸಕ ಹೊನ್ನಾಳಿ ಕೆ.ಪಿ. ಗಂಗಾಧರ್, ಚಿಟ್ಟಕ್ಕಿ ನಾಗರಾಜ್, ಭೋವಿ ಕುಮಾರ್, ಪಿ.ಹೆಚ್. ಶಿವಕುಮಾರ್, ಪಾಳೇಗಾರ್ ನಾಗರಾಜ್, ಆದಾಪುರ ವಿಜಯಕುಮಾರ್, ಹೊಸಳ್ಳಿ ಕರಿಬಸಪ್ಪ, ಕೆ.ಜಿ. ಕೊಟ್ರೇಶಪ್ಪ, ಕೆ.ಜಿ. ಪರಮೇಶ್ವರಪ್ಪ, ಎಂ.ಆರ್. ಮಹಾದೇವಪ್ಪ, ಎನ್.ಕೆ. ರಾಜೀವ್, ಬಟ್ಟೆ ಅಂಗಡಿ ವಿಶ್ವನಾಥ್, ಹೆಚ್.ಸಿ. ವಿಜಯಕುಮಾರ್, ಬಿ.ಎಂ. ಹರ್ಷ, ಬಿ. ರುದ್ರೇಶ್, ಬಿ.ಎನ್. ಕಿರಣ್, ಬಿ.ಎನ್. ಸಜ್ಜನ್, ಬಿ.ಸಿ. ಸತೀಶ್ ಇನ್ನಿತರರು ಭಾಗವಹಿಸಿದ್ದರು.
ನಂತರ ಕುಂಬಳೂರು ಗ್ರಾಮಕ್ಕೆ ಆಗಮಿಸಿದ ಶಿಲಾಮೂರ್ತಿಗಳಿಗೆ ಗ್ರಾಮಸ್ಥರು ಭಕ್ತಿ ಪೂರ್ವಕ ಸ್ವಾಗತದೊಂದಿಗೆ ಬರಮಾಡಿಕೊಂಡು, ವಿವಿಧ ವಾದ್ಯಗಳೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಿದರು. ಗ್ರಾ.ಪಂ. ಅಧ್ಯಕ್ಷೆ ಲೀಲಾ ಶಿವಕುಮಾರ್, ಉಪಾಧ್ಯಕ್ಷ ಹೆಚ್. ಹನುಮಂತಪ್ಪ, ತಾ.ಪಂ. ಮಾಜಿ ಅಧ್ಯಕ್ಷ ಮಾಗಾನಹಳ್ಳಿ ಹಾಲಪ್ಪ, ಕೆ. ತೀರ್ಥಪ್ಪ, ಹುಲ್ಲುಮನಿ ನಿಂಗಣ್ಣ, ಎನ್. ಕಲ್ಲೇಶ್, ಅಂಗಡಿ ರಾಮಣ್ಣ, ಬಿ.ಜಿ. ನಿರಂಜನ್ ಸೇರಿದಂತೆ ಅನೇಕರು ಹಾಜರಿದ್ದರು.
ಪಿಎಸ್ಐ ವೀರಬಸಪ್ಪ, ಎಎಸ್ಐ ಬಸವರಾಜಪ್ಪ, ಹನುಮಂತಪ್ಪ ನೇತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಮೆರವಣಿಗೆ ನಂತರ ಶಿಲಾಮೂರ್ತಿಗಳನ್ನು ನೂತನ ದೇವಾಲಯಕ್ಕೆ ತರಲಾಯಿತು. ಇಂದಿನಿಂದ ಮೇ 14 ರವರೆಗೆ ಮೂರ್ತಿಗಳಿಗೆ ಜಲಾಧಿವಾಸ, ಕ್ಷೀರಾಧಿವಾಸ, ಧಾನ್ಯಾಧಿವಾಸ ಮತ್ತು ಪುಷ್ಪಾಧಿವಾಸ ಸೇರಿದಂತೆ ವಿವಿಧ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಲಾಗುವುದು.
ಮೇ 14 ರಂದು ರಂಭಾಪುರಿ ಜಗದ್ಗುರುಗಳವರಿಂದ ಶಿಲಾಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಮತ್ತು ದೇವಾಲಯ ಲೋಕಾರ್ಪಣೆ, ಕಳಾಸಾರೋಹಣ ಕಾರ್ಯಕ್ರಮ ಸರಳವಾಗಿ ಜರುಗಲಿದೆ.