ಹರಪನಹಳ್ಳಿ, ಜು.5- ಅಂಧ ಕಲಾವಿದರೊಬ್ಬರಿಗೆ ದಿನಸಿ ಕಿಟ್ ನೀಡುವ ಮೂಲಕ ಸ್ಥಳೀಯ ಪೊಲೀಸ್ ಪೇದೆಗಳು ಮಾನವೀಯತೆ ಮೆರೆದಿದ್ದಾರೆ.
ಪಟ್ಟಣದ ವಾಲ್ಮೀಕಿ ನಗರದ ಹಾರ್ಮೋನಿಯಂ ಶಿಕ್ಷಕ ಹಾಗೂ ಗಾಯಕ ಟಿ. ತಿಮ್ಮಪ್ಪನವರಿಗೆ ಆರಕ್ಷ ಕರಾದ ಬಿ.ನಿಂಗಪ್ಪ ಹಾಗೂ ಜಿ. ಕೊಟ್ರೇಶ್ ಅವರು ಆಹಾರ ಸಾಮಗ್ರಿಗಳ ಎರಡು ಕಿಟ್‍ಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಕಲಾವಿದರಾದ ತಿಮ್ಮಪ್ಪ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.