ಮಲೇಬೆನ್ನೂರು, ಏ.14- ಭಾನುವಳ್ಳಿ ಗ್ರಾಮದ ಎ.ಕೆ. ಕಾಲೋನಿ ಯಲ್ಲಿ ಸಂವಿಧಾನ ಶಿಲ್ಪಿ, ಮಹಾ ಮಾನವತಾ ವಾದಿ ಡಾ. ಬಿ.ಆರ್. ಅಂಬೇಡ್ಕರ್ ಅವರ 130ನೇ ಜಯಂತಿ ಅಂಗವಾಗಿ 20 ಅಡಿ ಎತ್ತ ರದ ಅಂಬೇಡ್ಕರ್ ಕಟ್ ಔಟ್ ಗೆ ಕ್ಷೀರಾಭಿಷೇಕ ಮಾಡಿ, ಪೂಜೆ ಸಲ್ಲಿಸಲಾಯಿತು.
ಡಿಎಸ್ಎಸ್ ಹರಿಹರ ತಾ. ಸಂಚಾಲಕ ಪಿ.ಜೆ. ಮಹಾಂತೇಶ್, ಗ್ರಾ.ಪಂ. ಸದಸ್ಯರಾದ ಹಳದಪ್ಪ, ಸೋಮಶೇಖರ್, ಚೌಡಪ್ಪ, ಮಂಜಪ್ಪ, ಪ್ರಶಾಂತ್, ಸಂತೋಷ್, ಮಂಜುನಾಥ್, ಭರತ್, ರಾಜಪ್ಪ, ಮಾರುತಿ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು