ಹರಿಹರ ತಹಶೀಲ್ದಾರ್ ರಾಮಚಂದ್ರ
ಹರಿಹರ, ಫೆ.10- ಸಾರ್ವಜನಿಕರು ಭಯ ಪಡದೇ ಕೋವಿಶೀಲ್ಡ್ ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ತಹಶೀಲ್ದಾರ್ ಕೆ. ಬಿ. ರಾಮಚಂದ್ರಪ್ಪ ಕರೆ ನೀಡಿದ್ದಾರೆ.
ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಕೊರೊನಾ ವೇಳೆ ಮುಂಚೂಣಿ ಯಾಗಿ ಕಾರ್ಯ ನಿರ್ವಹಿಸಿದ ತಾಲ್ಲೂಕು ಆಡ ಳಿತ, ನಗರಸಭೆ, ಪೊಲೀಸ್ ಇಲಾಖೆ ಇವುಗಳ ನೌಕರರಿಗೆ ಕೋವಿಶೀಲ್ಡ್ ಲಸಿಕೆ ಹಾಕುವ ವೇಳೆ ತಹಶೀಲ್ದಾರ್ ಮತ್ತು ಪೌರಾಯುಕ್ತರು ಲಸಿಕೆ ಹಾಕಿಸಿಕೊಂಡ ನಂತರ ಅವರು ಮಾತನಾಡಿದರು.
ಇಂದಿನ ಸಮಾಜದಲ್ಲಿ ಆರೋಗ್ಯವಾಗಿರು ವುದು ಬಹು ಮುಖ್ಯ ಅಂಶವಾಗಿರುತ್ತದೆ. ಕೋವಿ ಡ್ನಿಂದಾಗಿ ಜನರ ಜೀವನದಲ್ಲಿ ಸಾಕಷ್ಟು ಏರು ಪೇರಾಗಿದೆ. ಕೊರೊನಾ ಹೋಗಲಾಡಿಸಲು ಸರ್ಕಾರದ ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಗಲು ರಾತ್ರಿ ಎನ್ನದೆ ಶ್ರಮಪಟ್ಟು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಸರ್ಕಾರ ಲಸಿಕೆಯನ್ನು ಸಾರ್ವಜನಿಕರಿಗೆ ದೊರಕುವಂತೆ ಮಾಡಿದ್ದು, ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ ಎಂದು ಧೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ನಗರಸಭೆ ಪೌರಾಯುಕ್ತ ಉದಯಕುಮಾರ್, ಸರ್ವೇ ಇಲಾಖೆ ಎಡಿಎಲ್ಆರ್ ಕಸ್ತೂರಿ, ಚುನಾವಣಾ ಶಿರಸ್ತೇದಾರ ಪ್ರಶಾಂತ, ವಿ.ಎ. ಪ್ರಭು, ಲೋಹಿತ್ , ಶರೀಫ್, ಆನಂದ್, ಬಸವರಾಜ್, ಚುನಾವಣಾ ಶಾಖೆಯ ಉಮೇಶ್ , ಕಿರಣ್, ಸಂತೋಷ್, ಭಾರತಿ, ನರಸಮ್ಮ, ಮಂಜುಳಾ, ಸಂಗೀತ ಜೋಷಿ, ಪುಷ್ಪಾ, ಕೋಮಲ, ಲಕ್ಷ್ಮಿ, ವೀಣಾ, ನೇತ್ರಾವತಿ, ರಾಣಿ, ಸಾವಿತ್ರಾ, ಪುಷ್ಪಾ ದೊಡ್ಡಮನಿ, ತುಕಾರಾಮ್ ಧನಲಕ್ಷ್ಮೀ ಪೊಲೀಸ್ ಕೆ.ಪಿ. ರಾಧಕೃಷ್ಣ, ಪತ್ರಕರ್ತ ಚಿದಾನಂದ ಕಂಚಿಕೇರಿ ಇನ್ನಿತರರು ಲಸಿಕೆ ಹಾಕಿಸಿಕೊಂಡರು.
ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಚಂದ್ರಮೋಹನ್, ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಎಲ್. ಹನುಮನಾಯ್ಕ್, ಆರೋಗ್ಯ ಇಲಾಖೆ ಉಮ್ಮಣ್ಣ, ಎಂ.ವಿ. ಹೊರಕೇರಿ, ಡಾ. ಕಾವ್ಯ, ರಾಧಿಕಾ, ಉಮ್ಲಾನಾಯ್ಕ್, ಶೋಭಾ ಸಿಸ್ಟರ್, ಜ್ಯೋತಿ, ಶಾಂತ್, ಶಿವುಭಾಯಿ, ಬಿ.ಎಸ್. ಸುರೇಶ್, ಮಹೇಶ್, ಶಶಿಕಾಂತ್, ಪ್ರಕಾಶ್, ಮಣಿಕಂಠ ಇನ್ನಿತರರಿದ್ದರು.