ರಾಣೇಬೆನ್ನೂರು, ಜು.4- ಇಲ್ಲಿನ ತಹಶೀಲ್ದಾರ್ ಕಛೇರಿ ಎದುರು 20 ಕ್ಕೂ ಅಧಿಕ ಗಿಡ ನೆಟ್ಟು ಕಂದಾಯ ದಿನ ಆಚರಿಸಲಾಯಿತು. ತಹಶೀಲ್ದಾರ್ ಶಂಕರ್ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಆಮ್ಲಜನಕದ ಕೊರತೆ ನೀಗಿಸಲು ಗಿಡಗಳ ಅವಶ್ಯಕತೆ ಇದೆ ಎಂದು ಹೇಳಿದರು. ಉಪ ಅರಣ್ಯಾಧಿಕಾರಿ ಚಂದನ್ ಕುಮಾರ ವಾಲಿಕಾರ, ಉಪತಹಶೀಲ್ದಾರ್ ಎಸ್.ಎಂ. ಹಾದಿಮನಿ, ವೃತ ನಿರೀಕ್ಷಕ ಎಸ್.ಎನ್. ಕಡೂರ, ಕಂದಾಯಾಧಿಕಾರಿಗಳಾದ ಮಂಜುನಾಥ ಕೆಂಚರೆಡ್ಡಿ, ಅಶೋಕ ಅರಳೇಶ್ವರ, ಶೋಭಾ ರಿತ್ತಿ ಇನ್ನಿತರರಿದ್ದರು.
January 20, 2025