ಒಳಗುತ್ತಿಗೆ ನೌಕರರನ್ನಾಗಿ ಪರಿಗಣಿಸಲು ಆಗ್ರಹ
ದಾವಣಗೆರೆ, ಫೆ.10- ದಾವಣಗೆರೆ ವಿಶ್ವವಿದ್ಯಾನಿಲಯದ ಹೊರಗುತ್ತಿಗೆ ನೌಕರರನ್ನು ಒಳಗುತ್ತಿಗೆ ನೌಕರರನ್ನಾಗಿ ಪರಿಗಣಿಸಲು ಹಾಗೂ ಸೇವಾ ಭದ್ರತೆ ನೀಡಲು ಆಗ್ರಹಿಸಿ ದಾವಣಗೆರೆ ವಿಶ್ವವಿದ್ಯಾನಿಲಯದ `ಸಿ’ಮತ್ತು `ಡಿ’ ಗ್ರೂಪ್ ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ಇಲ್ಲಿಗೆ ಸಮೀಪದ ತೋಳಹುಣಸೆಯಲ್ಲಿನ ವಿಶ್ವವಿದ್ಯಾನಿಲಯದ ಮುಖ್ಯ ದ್ವಾರದ ಹತ್ತಿರ ನೌಕರರು ಇಂದು ಅನಿರ್ದಿಷ್ಟಾಧಿ ಧರಣಿ ಕೈಗೊಂಡಿದ್ದಾರೆ.
2009 ರಲ್ಲಿ ಸ್ಥಾಪಿತವಾದ ದಾವಣಗೆರೆ ವಿಶ್ವವಿದ್ಯಾನಿಲಯವು ಇದಕ್ಕೂ ಮುಂಚಿತವಾಗಿ ಕುವೆಂಪು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಕೇಂದ್ರವಾಗಿದ್ದಾಗಿನಿಂದಲೂ ವಿಶ್ವವಿದ್ಯಾನಿಲಯದ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ `ಸಿ¬ ಮತ್ತು §ಡಿ¬ ಗ್ರೂಪ್ ಖಾಯಂ ಹುದ್ದೆಗಳಿಗೆ ಎದುರಾಗಿ ಅನೇಕ ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ನೂರಾರು ನೌಕರರು ಪ್ರಾರಂಭಿಕ ಅತ್ಯಲ್ಪ ವೇತನದಿಂದ ದುಡಿಯುತ್ತಾ ಬಂದಿದ್ದು, ಎಷ್ಟೋ ಜನ ನೌಕರರು ಈ ಹುದ್ದೆಯನ್ನೇ ನಂಬಿಕೊಂಡು ಮಕ್ಕಳ ವಿದ್ಯಾಭ್ಯಾಸ, ಮನೆ ಬಾಡಿಗೆ ಹೀಗೆ ಜೀವನ ಸಾಗಿಸುತ್ತಿದ್ದು, ಕುಟುಂಬಕ್ಕೆ ಆಧಾರ ಸ್ತಂಭವಾಗಿದೆ. ಆದರೆ, ವಿಶ್ವವಿದ್ಯಾನಿಲಯದಲ್ಲಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಅಧಿಕಾರ ವಹಿಸಿಕೊಂಡ ಹಿಂದಿನ ಎಲ್ಲಾ ಕುಲಪತಿಗಳು, ಕುಲಸಚಿವ ರುಗಳು ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ನೀಡುವ ಅನೇಕ ಭರವಸೆಗಳನ್ನು ನೀಡುತ್ತಲೇ ಬಂದಿದ್ದು, ಭರವಸೆಗಳು ಭರ ಸೆಗಳಾಗಿಯೇ ಉಳಿದಿವೆ ಎಂದು ಪ್ರತಿಭಟ ನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ವಿಶ್ವವಿದ್ಯಾನಿಲಯಲ್ಲಿ ಹೊರಗುತ್ತಿಗೆ ಪಡೆದ ಏಜೆನ್ಸಿಗಳು, ನೌಕರರಿಗೆ ನೀಡುವ ಇಪಿಎಫ್ ಹಾಗೂ ಇಎಸ್ ಐ ಹಣವನ್ನು ತುಂಬುವಲ್ಲಿ, ವೇತನ ನೀಡುವುದರಲ್ಲಿ ಅನೇಕ ಲೋಪ-ದೋಷಗಳನ್ನು ಮಾಡುತ್ತಾ, ಮನಸೋ ಇಚ್ಚೆ ನೌಕರರನ್ನು ಶೋಷಣೆ ಮಾಡುತ್ತಲೇ ಬಂದಿರುತ್ತವೆ. ಇದರಿಂದ ಹೊರಗುತ್ತಿಗೆ ನೌಕರರಿಗೆ ಸಾಕಷ್ಟು ಆರ್ಥಿಕವಾಗಿ ನಷ್ಟವು ಆಗುತ್ತಿದ್ದು, ನೌಕರರು ಅಭದ್ರತೆಯಿಂದ ಜೀವನ ಸಾಗಿಸುವಂತಾಗಿದೆ ಎಂದು ಅಳಲಿಟ್ಟರು.
`ಸಿ¬ ಮತ್ತು §ಡಿ¬ ಗ್ರೂಪ್ ದರ್ಜೆಯ ಎಲ್ಲಾ ಹೊರಗುತ್ತಿಗೆ ನೌಕರರನ್ನು ಒಳಗುತ್ತಿಗೆ ನೌಕರರನ್ನಾಗಿ ಮಾಡಿಕೊಳ್ಳುವುದರಿಂದ ಪ್ರಸ್ತುತವಾಗಿ ಹೊರಗುತ್ತಿಗೆ ಏಜೆನ್ಸಿಗಳಿಗೆ ವಿಶ್ವವಿದ್ಯಾನಿಲಯದಿಂದ ಭರಿಸಲಾಗುತ್ತಿ ರುವ ನೌಕರರ ಸೇವಾ ಶುಲ್ಕ ಶೇ. 5ರಷ್ಟು ಹಾಗೂ ಸೇವಾ ತೆರಿಗೆ ಶೇ.18ರಷ್ಟು ಸೇರಿ ಒಟ್ಟು ಶೇ. 23ರಷ್ಟು ಹೆಚ್ಚುವರಿ ಖರ್ಚಿನ ಹಣವು ಉಳಿತಾಯ ಆಗಲಿದ್ದು, ಈ ಉಳಿತಾಯದ ಹಣವನ್ನು ನೇರವಾಗಿ ನೌಕರರ ಮೂಲ ವೇತನಕ್ಕೆ ಸೇರಿಸಿ ಪಾವತಿ ಮಾಡಿದ್ದಲ್ಲಿ ನೌಕರರ ಆರ್ಥಿಕ ಭದ್ರತೆ ಇನ್ನಷ್ಟು ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.
ದಾವಣಗೆರೆ ವಿಶ್ವವಿದ್ಯಾನಿಲಯ ದಲ್ಲಿಯೂ ಕೆಲವೇ ತಿಂಗಳುಗಳ ಹಿಂದೆಯಷ್ಟೇ ಹೊರಗುತ್ತಿಗೆ ಆಧಾರಲ್ಲಿ ಕೆಲಸ ಮಾಡುತ್ತಿದ್ದ 4 ಜನ ನೌಕರರನ್ನು ಒಳಗುತ್ತಿಗೆ ಮಾಡಿಕೊಂಡು ಇನ್ನಿತರೆ ನೌಕರರನ್ನು ಕಡೆಗಣಿಸಿರುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾನಿಲಯದಲ್ಲಿ ಪ್ರಸ್ತತ ಕೆಲಸ ನಿರ್ವಹಿಸುತ್ತಿರುವ 250 ಜನ ಹೊರಗುತ್ತಿಗೆ ನೌಕರರನ್ನು ಒಳಗುತ್ತಿಗೆ ನೌಕರರನ್ನಾಗಿ ಪರಿಗಣಿಸುವಂತೆ ಒತ್ತಾಯಿಸಿದರು.
ಧರಣಿಯಲ್ಲಿ ಸಂಘದ ಗೌರವಾಧ್ಯಕ್ಷ ಮಂಜುನಾಥ ಕೈದಾಳೆ, ಗೌರವ ಕಾರ್ಯದರ್ಶಿ ಮಂಜುನಾಥ ಕುಕ್ಕವಾಡ, ಉಪಾಧ್ಯಕ್ಷ ಎಲ್.ಹೆಚ್. ಪ್ರಕಾಶ್ ಸೇರಿದಂತೆ ಇತರರು ಭಾಗವಹಿಸಿದ್ದರು.