ಜಿಲ್ಲಾ ಕಸಾಪ ಚುನಾವಣೆ : ಅಂತಿಮ ಕಣದಲ್ಲಿ ಇಬ್ಬರು

 ಡಾ. ಎಸ್.ಹೆಚ್. ಮಂಜುನಾಥ ಕುರ್ಕಿ ಸೇರಿದಂತೆ, ಆರು ಜನರಿಂದ ನಾಮಪತ್ರ ವಾಪಸ್

ದಾವಣಗೆರೆ, ಏ.12- ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಬರುವ ಮೇ 9ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ 8 ಜನರ ಪೈಕಿ 6 ಜನರು ತಮ್ಮ ಉಮೇದುವಾರಿಕೆ ಅರ್ಜಿಯನ್ನು ವಾಪಸ್ ಪಡೆದಿದ್ದಾರೆ. ಇದರಿಂದಾಗಿ ಅಂತಿಮ ಕಣದಲ್ಲಿ ಇಬ್ಬರು ಉಳಿದಿದ್ದಾರೆ. 

ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಸ್.ಹೆಚ್. ಮಂಜುನಾಥ ಕುರ್ಕಿ ಅವರು ಮತ್ತೊಂದು ಅವಧಿಗೆ ಆಯ್ಕೆ ಬಯಸಿ ಸಲ್ಲಿಸಿದ್ದ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ. ಹರಿಹರ ತಾಲ್ಲೂಕು ಕಸಾಪ ಅಧ್ಯಕ್ಷ ರೇವಣಸಿದ್ದಪ್ಪ ಅಂಗಡಿ ಅವರೂ ಕೂಡಾ ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದ ನಾಮಪತ್ರವನ್ನು ಹಿಂದಕ್ಕೆ ಪಡೆದಿದ್ದಾರೆ. 

ಉಳಿದಂತೆ ಹರಿಹರ ತಾಲ್ಲೂಕು ಕುಂಬಳೂರಿನ ಕೆ. ಕಾಮರಾಜ್,  ದಾವಣಗೆರೆಯ ರವಿ ಬಾಡ, ಶಾಮನೂರಿನ ಎಂ.ಎ. ರಾಜಣ್ಣ ಪೂಜಾರ್, ದಾವಣಗೆರೆಯ ಕೆ.ಎಂ. ರಾಘವೇಂದ್ರಾಚಾರ್ ಅವರುಗಳು ತಮ್ಮ ಉಮೇದುವಾರಿಕೆ ಅರ್ಜಿಗಳನ್ನು ವಾಪಸ್ ಪಡೆದಿದ್ದಾರೆ. ನಾಮಪತ್ರ ವಾಪಸ್ ಪಡೆಯಲು ಇಂದು  ಕಡೇ ದಿನವಾಗಿತ್ತು.  

ದಾವಣಗೆರೆ ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ ಮತ್ತು ಶಿಕ್ಷಕ ಆರ್. ಶಿವಕುಮಾರಸ್ವಾಮಿ ಕುರ್ಕಿ ಅವರುಗಳು ಅಂತಿಮ ಕಣದಲ್ಲಿದ್ದು, ಇಬ್ಬರ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.

error: Content is protected !!