ಹರಪನಹಳ್ಳಿ, ಫೆ.9- ಪೋ ಷಕರು ಸಾಮಾಜಿಕ ಜಾಲತಾಣ ದಲ್ಲಿ ದಾರ್ಶನಿಕ ವ್ಯಕ್ತಿಗಳ ಚಿಂತನೆಗಳನ್ನು ಸೃಜನಾತ್ಮಕವಾಗಿ ಗ್ರಹಿಸಿಕೊಂಡು ತಮ್ಮ ಮಕ್ಕಳಿಗೆ ತಿಳಿಸುವಂತೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಉಂಡಿ ಮಂಜುಳಾ ಶಿವಪ್ಪ ಹೇಳಿದರು.
ಪಟ್ಟಣದ ವಕೀಲರ ಸಂಘದ ಸಭಾ ಭವನದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಮತದಾರರ ದಿನಾಚರಣೆ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಆದರ್ಶ ವ್ಯಕ್ತಿಗಳ ಬಗ್ಗೆ ಚಿಂತಿಸದೇ ಬೇಡದವರ ಕುರಿತು ಮಾತನಾಡುತ್ತಾ ಸಮಯವನ್ನು ವ್ಯರ್ಥಮಾಡಿಕೊಳ್ಳುತ್ತಿದ್ದೇವೆ. ಸ್ವಾಮಿ ವಿವೇಕಾನಂದ, ಗಾಂಧೀಜಿ, ಸುಭಾಷ್ಚಂದ್ರ ಬೋಸ್, ಡಾ. ಬಿ.ಆರ್.ಅಂಬೇಡ್ಕರ್ ಅಂತಹ ಮಹಾಪುರುಷರ ಚಿಂತನೆಗಳನ್ನು ಅರಿತು ಅವರ ಅನುಯಾಯಿಗಳಾಗಬೇಕಿದೆ ಎಂದು ತಿಳಿಸಿದರು.
ಈ ಸಂದರ್ಭಲ್ಲಿ ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ಹಾಗೂ ಸಿವಿಲ್ ನ್ಯಾಯಾಧೀಶೆ ಬಿ.ಜಿ. ಶೋಭಾ, ಎಪಿಪಿ ಎ.ಎಂ. ಬಸವರಾಜ್, ವಕೀಲರ ಸಂಘದ ಅಧ್ಯಕ್ಷ ಸಿ. ಚಂದ್ರೇಗೌಡ್ರು ಮಾತನಾಡಿದರು. ವಕೀಲರ ಸಂಘದ ಉಪಾಧ್ಯಕ್ಷ ಟಿ. ವೆಂಕಟೇಶ್, ಹಿರಿಯ ವಕೀಲರಾದ ಕೆ. ಜಗದಪ್ಪ, ಗಂಗಾಧರ್ ಗುರುಮಠ್, ಬಸವರಾಜ್, ಬಾಗಳಿ ಮಂಜುನಾಥ್, ಕೃಷ್ಣಮೂರ್ತಿ, ಜಗದೀಶ್ ಗೌಡ್ರು, ಗುಡದಯ್ಯ, ರೇವಣಸಿದ್ದಪ್ಪ, ಜಿ.ಎಸ್. ತಿಪ್ಪೇಸ್ವಾಮಿ, ಬಂಡ್ರಿ ಎಂ. ಗೋಣಿಬಸಪ್ಪ, ಆನಂದ, ಬಸವರಾಜ್, ಕೊಟ್ರೇಶ್ ಇನ್ನಿತರರಿದ್ದರು.