ಜಿ.ಪಂ. ಮಾಜಿ ಸದಸ್ಯ ಮಹೇಶ್
ಹೊನ್ನಾಳಿ, ಜು.4- ಕೊರೊನಾ ನಿಗ್ರಹಿಸುವಲ್ಲಿ ವೈದ್ಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪತ್ರಕರ್ತರ ಸೇವೆ ಅನನ್ಯವಾದದ್ದು ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎಂ.ಆರ್. ಮಹೇಶ್ ಹೇಳಿದರು.
ವೈದ್ಯರ ದಿನಾಚರಣೆ, ಪತ್ರಿಕಾ ದಿನಾಚರಣೆ ಅಂಗವಾಗಿ ಆಶಾ ಕಾರ್ಯಕರ್ತೆಯರಿಗೆ ಮೊನ್ನೆ ಏರ್ಪಡಿಸಿದ್ದ ಆಹಾರ ಮತ್ತು ತರಕಾರಿ ಕಿಟ್‍ಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೊರೊನಾ 1 ಮತ್ತು 2ನೇ ಅಲೆಗಳ ಸಂದರ್ಭದಲ್ಲಿ ತಮ್ಮ ಜೀವದ ಹಂಗುತೊರೆದು ಸಮಾಜದ ಹಿತಕ್ಕಾಗಿ ವೈದ್ಯರ ಸಮುದಾಯ, ಆಶಾ, ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸರು, ಹಾಗೂ ಪತ್ರಕರ್ತರ ಸೇವೆ ಸ್ಮರಿಸುವಂತಹದ್ದಾಗಿದ್ದು ಅವರ ಸೇವೆಯನ್ನು ಗೌರವಿಸುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.
ಪುರಸಭೆ ಸದಸ್ಯರಾದ ಬಾಬು ಹೋಬಳದಾರ್, ಎಂ.ಪಿ. ರಾಜು, ಇಂಚರ ಮಂಜು, ಆನಂದ್, ದೀಕ್ಷಿತ್, ಕುಮಾರ್, ನಾಗ ಸೇರಿದಂತೆ ಅನೇಕ ಯುವ ಮುಖಂಡರು ಹಾಜರಿದ್ದರು.