ದೇಶದ ಏಕತಾಗಿ ಜೀವನವನ್ನೇ ಮುಡುಪಾಗಿಟ್ಟಿದ್ದ ಮುಖರ್ಜಿ

ಹರಪನಹಳ್ಳಿ ಪುರಸಭೆ ಸದಸ್ಯ ಹಾಗೂ ತಾಲ್ಲೂಕು ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷ ಎಂ.ಕೆ.ಜಾವೀದ್ ಶ್ಲ್ಯಾಘನೆ

ಹರಪನಹಳ್ಳಿ, ಜು.4 – ಶ್ಯಾಮ್‍ಪ್ರಸಾದ್ ಮುಖರ್ಜಿಯವರು ದೇಶದ ಏಕತೆ ಮತ್ತು ಸಮಗ್ರತೆಗಾಗಿ ತಮ್ಮ ಜೀವನವನ್ನೇ ಮುಡುಪಾ ಗಿಟ್ಟದ್ದರು ಎಂದು ಪುರಸಭೆ ಸದಸ್ಯ ಹಾಗೂ ತಾಲ್ಲೂಕು ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷ ಎಂ.ಕೆ.ಜಾವೀದ್ ತಿಳಿಸಿದರು.

ಭಾರತೀಯ ಜನಸಂಘದ ಸಂಸ್ಥಾಪಕ ಡಾ. ಶ್ಯಾಮ್‍ಪ್ರಸಾದ್ ಮುಖರ್ಜಿಯವರ 68ನೇ ಪುಣ್ಯಸ್ಮರಣೆ ಅಂಗವಾಗಿ ಪಟ್ಟಣದ ಹಿಪ್ಪೆತೋಟದಲ್ಲಿರುವ ಸರ್ಕಾರಿ ಉರ್ದು ಪ್ರೌಢ ಶಾಲೆಯ ಆವರಣದ ಮೈದಾನವನ್ನು ಸ್ವಚ್ಛಗೊಳಿಸಿ, ಸಸಿ ನೆಟ್ಟು ನೀರುಣಿಸಿದ ಬಳಿಕ ಮಾತನಾಡಿದ ಅವರು, ಮುಖರ್ಜಿಯವರು ನೀತಿ, ತತ್ವದ ಆಧಾರದ ಮೇಲೆ ನೆಹರೂ ನೇತೃತ್ವದ ಮಂತ್ರಿ ಮಂಡಲಕ್ಕೆ ರಾಜೀನಾಮೆ ನೀಡಿದರು. ಈ ಮೂಲಕ ಮಂತ್ರಿ ಪದವಿ ತ್ಯಾಗ ಮಾಡಿದ ಸ್ವಾತಂತ್ರ್ಯ ಭಾರತದ ಪ್ರಥಮ ರಾಷ್ಟ್ರ ನಾಯಕ ಶ್ಯಾಮ್ ಪ್ರಸಾದ್ ಮುಖರ್ಜಿಯವರು. ದೇಶದ ಪರಿಸ್ಥಿತಿ ಅಧೋಗತಿಗೆ ಇಳಿದಾಗ, ರಾಜಕೀಯ ಅಸ್ಥಿರತೆ, ಆಡಳಿತ ದೋಷ ಕಂಡಾಗ ‘ಭಾರತೀಯ ಜನಸಂಘ’ ಎಂಬ ಹೊಸ ಪಕ್ಷಕ್ಕೆ ನಾಂದಿ ಹಾಡಿದರು ಎಂದರು.

ಶ್ಯಾಮ್‍ಪ್ರಸಾದ್ ಮುಖರ್ಜಿಯವರ ಉದಾತ್ತ ಆದರ್ಶಗಳು, ಆಲೋಚನೆಗಳು ಮತ್ತು ಜನಸೇವೆಯ ಬದ್ಧತೆ ನಮಗೆ ಸದಾ ಸ್ಫೂರ್ತಿಯಾಗಿವೆ ಮತ್ತು  ರಾಷ್ಟ್ರೀಯ ಏಕೀಕರಣಕ್ಕಾಗಿ ಅವರು ಮಾಡಿದ ಪ್ರಯತ್ನಗ ಳನ್ನು ಎಂದಿಗೂ ಮರೆಯಲಾಗುವುದಿಲ್ಲ ಎಂದ ಅವರು ಭಾರತದ ಅಸ್ಮಿತೆ ಮತ್ತು ಸಮಗ್ರತೆಯ ರಕ್ಷಣೆಗಾಗಿ ಮುಖರ್ಜಿ ಅವರು ತಮ್ಮನ್ನೇ ಸಮರ್ಪಿಸಿಕೊಂಡಿದ್ದರು. ಮುಖರ್ಜಿಯವರ ತ್ಯಾಗ, ಸಮರ್ಪಣಾ ಭಾವ ಮತ್ತು ಆದರ್ಶಗಳು ಮುಂಬರುವ ಪೀಳಿಗೆಗೆ ಮಾರ್ಗದರ್ಶನ ನೀಡುತ್ತವೆ ಎಂದರು.

ಮುಖರ್ಜಿಯವರು ಜನಸಂಘ ಸ್ಥಾಪಿಸಿ ದ್ದು ಅಧಿಕಾರಕ್ಕಾಗಿ ಅಲ್ಲ, ರಾಷ್ಟ್ರೀಯ ಪುನರ್‍ ನಿರ್ಮಾಣಕ್ಕಾಗಿ. ಅವರು ಸಾಂಸ್ಕೃತಿಕ ರಾಷ್ಟ್ರೀ ಯತೆಯ ವಾಸ್ತುಶಿಲ್ಪಿ, ಮಾತೃಭಾಷೆಯನ್ನು ಶಿಕ್ಷಣದ ಮಾಧ್ಯಮವನ್ನಾಗಿ ಮಾಡಲು ಒಲವು ತೋರಿದ್ದರು ಎಂದು ಸ್ಮರಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಸತ್ತೂರು ಹಾಲೇಶ್, ಎಸ್ಟಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಆರ್.ಲೋಕೇಶ್, ತಾಲ್ಲೂಕು ಬಿಜೆಪಿ ಉಪಾಧ್ಯಕ್ಷ ನಿಟ್ಟೂರು ಸಣ್ಣ ಹಾಲಪ್ಪ, ಪುರಸಭೆ ಮಾಜಿ ಅಧ್ಯಕ್ಷ ಬಿ.ಮೆಹಬೂಬ್ ಸಾಬ್, ಅಲ್ಪಸಂಖ್ಯಾತ ಮೋ ರ್ಚಾ ಜಿಲ್ಲಾ ಉಪಾಧ್ಯಕ್ಷ ನಿಜಾಮ್, ತಾಲ್ಲೂಕು ಅಲ್ಪಸಂಖ್ಯಾತರ ಮೋರ್ಚಾ ಕಾರ್ಯದರ್ಶಿ ಅತೀಕ್ ರೆಹಮಾನ್ ಸಾಬ್, ಫೈರೂಜ್ ಸಾಬ್, ಡಿ.ಎಂ.ಅಬ್ದುಲ್ ರಹೇಮಾನ್, ಮುಖಂಡರಾದ ಸಿ.ಸತ್ತರ್ ಸಾಬ್, ಜಿಲಾನ್ ಸಾಬ್, ಚಾಂದ್‌ಬಾಷ, ಹೊಂಬಳಗಟ್ಟಿ ಮೆಹಬೂಬ್ ಸಾಬ್, ಸುಭಾನ್, ಹಸೇನ್, ಬಡಿಗಿ ರಹಮತ್‍ ಉಲ್ಲಾ ಸೇರಿದಂತೆ ಮತ್ತಿತರೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

error: Content is protected !!