ಹರಿಹರ, ಜು.4- ತಾಲ್ಲೂಕಿ ನಲ್ಲಿ ಮಾದಿಗ ಸಮಾಜ ಸುಮಾರು 30 ಸಾವಿರ ಮತಗಳನ್ನು ಹೊಂದಿ ದ್ದು, ಇಲ್ಲಿಯವರೆಗೂ ಯಾವುದೇ ತಾಲ್ಲೂಕು ಮಟ್ಟದ ಬಾಬಾ ಸಾಹೇಬ್ ಅಂಬೇಡ್ಕರ್ ಭವನವಾಗಲೀ, ಡಾ. ಬಾಬು ಜಗಜೀವನ ರಾಮ್ ಭವನವಾಗಲೀ ಹೊಂದಿರುವುದಿಲ್ಲ. ಡಾ. ಬಿ.ಆರ್ ಅಂಬೇಡ್ಕರ್ ಭವನ ನಿರ್ಮಾಣ ಮಾದಿಗ ಸಮಾಜದವರ 10 ವರ್ಷಗಳ ಬೇಡಿ ಕೆಯಾ ಗಿದ್ದು, ಭವನ ನಿರ್ಮಾಣಕ್ಕೆ ನಗರದ ಹೃದಯ ಭಾಗವಾದ ಹಳೆ ಕೋರ್ಟಿನ (ಟೌನ್ ಹಾಲ್) ನಿವೇಶನವನ್ನು ನಗರಸಭೆಯಿಂದ ಮಂಜೂರು ಮಾಡಿಸಿ ಕೊಡುವಂತೆ ನಗರಸಭೆಗೆ ಶಿಫಾರಸ್ಸು ಮಾಡಬೇಕೆಂದು ಮನವಿಯನ್ನು ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಅವರಿಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾದಿಗ ಸಮಾಜದ ಮುಖಂಡರು, ನಗರ ಸಭಾ ಸದಸ್ಯರುಗಳಾದ ಪಿ.ಎನ್ ವಿರುಪಾಕ್ಷಪ್ಪ, ರಜನಿಕಾಂತ್, ಹನುಮಂತಪ್ಪ, ಸಮಾಜದ ಮುಖಂಡರಾದ ಹೆಚ್. ನಿಜಗುಣ, ಹೆಚ್. ನಾಗಭೂಷಣ್, ನಿರಂಜನ್ ಮೂರ್ತಿ, ಬಿ.ಎನ್ ರಮೇಶ್, ಸದಾಶಿವ, ಸಂತೋಷ್ ದೊಡ್ಮನಿ, ಹುಲುಗಪ್ಪ, ಶಂಕರ್, ಸಂತೋಷ್ ನೋಟದವರ, ಎಂ. ಮಂಜುನಾಥ್ ಇತರರು ಹಾಜರಿದ್ದರು.