ದಾವಣಗೆರೆ, ಏ.9- ಪಡಿತರ ಚೀಟಿಯಲ್ಲಿ ಸೇರ್ಪಡೆಯಾಗಿರುವ ಯಾವುದೇ ವ್ಯಕ್ತಿ ಮೃತರಾಗಿದ್ದಲ್ಲಿ ಅಂತಹ ವ್ಯಕ್ತಿಗಳ ಹೆಸರುಗಳನ್ನು ಪಡಿತರ ಚೀಟಿಯಿಂದ ತೆಗೆಸುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸೂಚನೆ ನೀಡಿದ್ದಾರೆ.
ಪಡಿತರ ಚೀಟಿಯಲ್ಲಿ ಸೇರ್ಪಡೆಯಾಗಿರುವ ಯಾವುದೇ ವ್ಯಕ್ತಿ ಮೃತಪಟ್ಟಲ್ಲಿ ಅಂತಹ ವ್ಯಕ್ತಿಯ ಹೆಸರನ್ನು ಪಡಿತರ ಚೀಟಿಯಿಂದ ತೆಗೆಸುವುದು ಆಯಾ ಕುಟುಂಬದ ಮುಖ್ಯಸ್ಥರ ಜವಾಬ್ದಾರಿಯಾಗಿರುತ್ತದೆ.
ಯಾವುದೇ ವ್ಯಕ್ತಿ ಮೃತರಾಗಿದ್ದರೆ ಅಂತಹವರಿಗೆ ಸಂಬಂಧಿಸಿದ ಮರಣ ಪ್ರಮಾಣ ಪತ್ರ ನೀಡಿ, ಪಡಿತರ ಚೀಟಿಗಳಿಂದ ಹೆಸರನ್ನು ತಕ್ಷಣ ತೆಗೆಸಲು ಕ್ರಮ ಕೈಗೊಳ್ಳುವುದು ಆಯಾ ಕುಟುಂಬದ ಮುಖಸ್ಥರ ಹೊಣೆಯಾಗಿರುತ್ತದೆ. ಒಂದು ವೇಳೆ ಮೃತರ ಹೆಸರುಗಳನ್ನು ಪಡಿತರ ಚೀಟಿಗಳಿಂದ ತಕ್ಷಣ ತೆಗೆಸಿ ಹಾಕದೆ, ಅವರ ಹೆಸರಿನಲ್ಲಿ ಪಡಿತರ ಪಡೆಯುವುದನ್ನು ಮುಂದುವರೆಸಿದ್ದಲ್ಲಿ, ಮೃತರ ಹೆಸರಿನಲ್ಲಿ ಪಡೆಯುವ ಪಡಿತರ ವಸ್ತುಗಳ ಮೌಲ್ಯವನ್ನು ವಸೂಲಿ ಮಾಡುವುದರ ಜೊತೆಗೆ ಕಾನೂನು ಕ್ರಮ ಜರುಗಿಸಲಾಗುವುದೆಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.