ಕಸಾಪ ಚುನಾವಣೆ ಘೋಷಣೆ ; ಸಮ್ಮೇಳನ ಸೂಕ್ತವಲ್ಲ : ಶಿವು ಕುರ್ಕಿ

ಕಸಾಪ ಚುನಾವಣೆ ಘೋಷಣೆ ; ಸಮ್ಮೇಳನ ಸೂಕ್ತವಲ್ಲ : ಶಿವು ಕುರ್ಕಿ - Janathavaniದಾವಣಗೆರೆ ಫೆ.7 – ಕನ್ನಡ ಸಾಹಿತ್ಯ ಪರಿಷತ್ತಿಗೆ ಈಗಾಗಲೇ ರಾಜ್ಯ ಚುನಾವಣಾ ಆಯೋಗವು ಬರುವ ಮೇ 9ರಂದು ಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಿಸಿದ್ದು, ಈ ಹಿನ್ನೆಲೆ ಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವುದು ಸೂಕ್ತವಲ್ಲ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಆರ್. ಶಿವಕುಮಾರಸ್ವಾಮಿ ಕುರ್ಕಿ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್‍ಗೆ ಮೇ 9 ರಂದು ಚುನಾವಣೆ ನಡೆಯುವುದು ಖಚಿತವಾದರೂ ಏಪ್ರಿಲ್‍ನಲ್ಲಿ ಹಾವೇರಿ ಸಾಹಿತ್ಯ ಸಮ್ಮೇಳನ ಮತ್ತು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾರ್ಚ್ ಮಾಹೆಯಲ್ಲಿ ನಡೆಸುವುದಾಗಿ ಪರಿಷತ್ ಅಧ್ಯಕ್ಷರುಗಳು ಘೋಷಿಸಿರುವುದು ಅಕ್ಷಮ್ಯ ಅಪರಾಧ ಎಂದು ಕುರ್ಕಿ ಹೇಳಿದ್ದಾರೆ.

ದಾವಣಗೆರೆ ಜಿಲ್ಲಾ ಕಸಾಪ ಹಾಲಿ ಅಧ್ಯಕ್ಷರು ಮತ್ತೊಂದು ಅವಧಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿರುವ ಕಾರಣ, ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಸುವುದು ಮತದಾರರ ಮೇಲೆ ಪ್ರಭಾವ ಬೀರಿದಂತಾಗುತ್ತದೆ.  ಕಾರಣ ಚುನಾವಣಾಧಿಕಾರಿಗಳು ಈ ಕೂಡಲೇ ಚುನಾವಣಾ ನೀತಿ ಸಂಹಿತೆ ಜಾರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕಸಾಪ ಸಮಸ್ತ ಆಜೀವ ಸದಸ್ಯರು  ಈ ಬಗ್ಗೆ ತಮ್ಮ ವಿರೋಧವನ್ನು ಪತ್ರ ಮೂಲಕ ಕೇಂದ್ರ ಕಸಾಪ ಕಛೇರಿಗೆ ಕಳುಹಿಸಬೇಕು ಎಂದು ಶಿವಕುಮಾರಸ್ವಾಮಿ ಕುರ್ಕಿ ಕೇಳಿಕೊಂಡಿದ್ದಾರೆ.

error: Content is protected !!